ಶ್ರೀನಗರ, ಜೂ.18 (DaijiworldNews/MB) : ಕಳೆದ ಒಂದು ತಿಂಗಳಿನಿಂದ ಜಮ್ಮು ಕಾಶ್ಮೀರದಲ್ಲಿ ಉಗ್ರರನ್ನು ಭಾರತೀಯ ಭದ್ರತಾ ಪಡೆ ಹೊಡೆದುರುಳಿಸುತ್ತಲ್ಲಿದ್ದು ಗುರುವಾರ ಮತ್ತೋರ್ವ ಉಗ್ರರನ್ನು ಭದ್ರತಾ ಪಡೆ ಹತ್ಯೆ ಮಾಡಿದೆ.
ಭದ್ರತಾ ಪಡೆ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಜಮ್ಮು-ಕಾಶ್ಮೀರದ ಆವಂತಿಪೊರಾ ಜಿಲ್ಲೆಯ ಮೀಜ್ ಗ್ರಾಮದ ಪಂಪೊರೆ ವಲಯದ ಒರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಸ್ತುತ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.