ನವದೆಹಲಿ, ಜೂ 18(Daijiworld News/MSP): ಕೊವೀಡ್ ನಂತರ ಉಂಟಾಗಿರುವ ಬಿಕ್ಕಟ್ಟೇ ಅವಕಾಶವಾಗಿ, ಅಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಭಾರತವನ್ನು ಸ್ವಾವಲಂಬಿಗಳಾಗಿರಲು ಕಲಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.
"ಭಾರತವು ಈ ಕೋವೀಡ್ -19 ಬಿಕ್ಕಟ್ಟನ್ನು ಒಂದು ಅವಕಾಶವನ್ನಾಗಿ ಪರಿವರ್ತಿಸುತ್ತದೆ. ಇದು ಭಾರತವನ್ನು ಸ್ವಾವಲಂಬಿಗಳಾಗಿರಲು ಕಲಿಸಿದ್ದು ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಭಾರತವನ್ನು ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಗಳನ್ನಾಗಿ ಮಾಡಲು, ಇಂದು ಒಂದು ಪ್ರಮುಖ ಹೆಜ್ಜೆ ಇಡಲಾಗುತ್ತಿದೆ" ಎಂದು 41 ಕಲ್ಲಿದ್ದಲು ಗಣಿಗಳ ಹರಾಜು ಪ್ರಾರಂಭಿಸುವ ಕಾರ್ಯಕ್ರಮವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ ಹೇಳಿದರು.
"ನಾವು ಇಂದು ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಗಾಗಿ ಹರಾಜನ್ನು ಪ್ರಾರಂಭಿಸುತ್ತಿಲ್ಲ, ಆದರೆ ದಶಕಗಳ ಲಾಕ್ಡೌನ್ನಿಂದ ಕಲ್ಲಿದ್ದಲು ವಲಯವನ್ನು ಹೊರತರುತ್ತಿದ್ದೇವೆ" ಎಂದು ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮವನ್ನು ಉದ್ದೇಶಿಸಿ ಹೇಳಿದರು.
"ವಿಶ್ವದ ನಾಲ್ಕನೇ ಅತಿದೊಡ್ಡ ಕಲ್ಲಿದ್ದಲು ನಿಕ್ಷೇಪಗಳನ್ನು ಹೊಂದಿದ್ದರೂ ಮತ್ತು ಎರಡನೇ ಅತಿದೊಡ್ಡ ಉತ್ಪಾದಕನಾಗಿದ್ದರೂ ಭಾರತವು ಕಲ್ಲಿದ್ದಲನ್ನು ರಫ್ತು ಮಾಡುತ್ತಿಲ್ಲ ಆದರೆ ವಿಶ್ವದಲ್ಲೇ ಕಲ್ಲಿದ್ದಲು ಅಮದು ಮಾಡಿಕೊಳ್ಳುವಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ "ಎಂದು ಪ್ರಧಾನಿ ಹೇಳಿದರು.
"ದಶಕಗಳಿಂದ ದೇಶದ ಕಲ್ಲಿದ್ದಲ್ಲು ಕ್ಷೇತ್ರ ಸೆರೆಯಾಳುಗಳ ಜಾಲದಲ್ಲಿ ಸಿಕ್ಕು ನರಳುತ್ತಿತ್ತು.ನಮ್ಮ ಸರ್ಕಾರ ಈ ಜಾಲವನ್ನು ತೊಡೆದು ಹಾಕಿ ಕಲ್ಲಿದ್ದಲು ಗಣಿಗಳನ್ನು ವಾಣಿಜ್ಯ ಗಣಿಗಾರಿಕೆಗೆ ಅವಕಾಶ ಕಲ್ಪಿಸಿದೆ. ಇಂಧನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವುದು ನಮ್ಮ ಸರ್ಕಾರದ ಗುರಿಯಾಗಿದೆ" ಎಂದರು.