ಕೊಪ್ಪಳ, ಜೂ 18(Daijiworld News/MSP): ವಿಧಾನ ಪರಿಷತ್ ಚುನಾವಣೆಯಲ್ಲಿ ಎಚ್.ವಿಶ್ವನಾಥ್ ಅವರಿಗೆ ಟಿಕೆಟ್ ಕೈತಪ್ಪಿದೆ. ಹೀಗಾಗಿ ಅವರಿಗೆ ಬೇಸರವಾಗಿರುವುದು ಸಹಜ ಆದರೆ ಖಂಡಿತಾ ಪಕ್ಷವೂ ಅವರಿಗೆ ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನಮಾನ ನೀಡಲಿದೆ ಎಂದು ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಪಕ್ಷದ ಹೈಕಮಾಂಡ್ ಅಭ್ಯರ್ಥಿಗಳನ್ನ ಆಯ್ಕೆ ಮಾಡಿದೆ. ಇದಕ್ಕೆ ನಮ್ಮ ಅಭ್ಯಂತರವೇನಿಲ್ಲ, ಆದರೆ ನಮ್ಮನ್ನು ಬೆಂಬಲಿಸಿ ವಿಶ್ವನಾಥ್ ಬಂದಿದ್ದರೆ. ಪಕ್ಷ ಅವರನ್ನ ಎಂದೂ ಕೈ ಬಿಡಲ್ಲ ಶೀಘ್ರದಲ್ಲೇ ಅವರಿಗೆ ಸೂಕ್ತ ಸ್ಥಾನಮಾನ ಸಿಗಲಿದೆ.
ಹೈಕಮಾಂಡ್ ಮಟ್ಟದಲ್ಲಿ ಏನೂ ನಡೆದಿದೆ ಎನ್ನುವುದು ಬಹಿರಂಗಪಡಿಸಲು ಸಾಧ್ಯವಿಲ್ಲ. ಈಗಾಗಲೇ ನಮ್ಮ ಪಕ್ಷ ಒಂದು ನಿರ್ಧಾರ ತೆಗೆದುಕೊಂಡಿದೆ ಈ ಬಗ್ಗೆ ನಾನು ಹೆಚ್ಚೇನು ಮಾತಾಡಲ್ಲ. ವಿಶ್ವನಾಥ್ ಅವರು ನಿರಾಶೆ ಹೊಂದುವ ಅಗತ್ಯವೂ ಇಲ್ಲ ಎಂದರು.