ಭುವನೇಶ್ವರ, ಜೂ.18 (DaijiworldNews/MB) : ಸಾಂಸ್ಥಿಕ ಕ್ವಾರಂಟೈನ್ ಆದ ಬಳಿಕ 7 ದಿನಗಳ ಹೋಮ್ ಕ್ವಾರಂಟೈನ್ ಕಡ್ಡಾಯವಾಗಿದ್ದು ಮನೆಯಲ್ಲಿ ಜಾಗವಿಲ್ಲದ ಕಾರಣದಿಂದಾಗಿ ಯುವಕನೋರ್ವ 7 ದಿನಗಳ ಕಾಲ ಶೌಚಾಲಯದಲ್ಲೇ ಹೋಂ ಕ್ವಾರಂಟೈನ್ಗೆ ಒಳಗಾದ ಘಟನೆ ಒಡಿಶಾದ ಜಗತ್ಸಿಂಗ್ಪುರ ಜಿಲ್ಲೆಯಲ್ಲಿ ನಡೆದಿದೆ.
ಒಡಿಶಾಕ್ಕೆ ಹೊರ ರಾಜ್ಯದಿಂದ ಬಂದವರು 7 ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗೂ 7 ದಿನ ಹೋಮ್ ಕ್ವಾರಂಟೈನ್ಗೆ ಒಳಗಾಗುವ ನಿಯಮದ ಪ್ರಕಾರ ತಮಿಳುನಾಡಿನಿಂದ ಒಡಿಶಾಗೆ ಬಂದ 28 ವರ್ಷದ ಈ ಯುವಕ 7 ದಿನ ಸಾಂಸ್ಥಿಕ ಕ್ವಾರಂಟೈನ್ಗೆ ಒಳಗಾಗಿದ್ದಾನೆ.
ಮಾನಸ್ ಪಾತ್ರಾ ನುಗಾಂವ್ ಬ್ಲಾಕ್ನ ಜಮುಗಾಂವ್ನಲ್ಲಿರುವ ಈ ಯುವಕನ ಚಿಕ್ಕದಾದ ಮನೆಯಲ್ಲಿ 6 ಜನ ವಾಸಿಸುತ್ತಿದ್ದು ಈ ಕಾರಣದಿಂದ ಅಲ್ಲಿ ವಾಸಿಸಲು ಅಧಿಕಾರಿಗಳು ಅವಕಾಶ ನೀಡಲಿಲ್ಲ. ಈ ಕಾರಣದಿಂದ ಬೇರೆ ವ್ಯವಸ್ಥೆಯಿಲ್ಲದೇ ಈ ಯುವಕ ಸ್ವಚ್ಛ್ ಭಾರತ್ನ ಶೌಚಾಲಯದ ಶೆಲ್ಟರ್ನಲ್ಲೇ 7 ದಿನ ಕಳೆದಿದ್ದು ಕೊರೊನಾದ ಲಕ್ಷಣಗಳು ಇಲ್ಲದ ಕಾರಣ ಮನೆಯಲ್ಲಿ ವಾಸಿಸಲು ಆರಂಭಿಸಿದ್ದಾನೆ.
ಈ ಬಗ್ಗೆ ಮಾತನಾಡಿರುವ ಯುವಕ, ಕೊರೊನಾದ ಈ ಸಂದರ್ಭದಲ್ಲಿ ಮನೆಯವರ ಸುರಕ್ಷತೆಯ ದೃಷ್ಟಿಯಿಂದ ಶೌಚಾಲಯದಲ್ಲೇ ಕಾಲ ಕಳೆಯಬೇಕು ಎಂದು ಒತ್ತಾಯಿಸಿದರು. ಹೀಗಾಗಿ ಶೌಚಾಲಯದಲ್ಲೇ ಇದ್ದೆ ಎಂದು ಹೇಳಿದ್ದಾರೆ.