ಬೆಂಗಳೂರು, ಜೂ 18 (DaijiworldNews/SM): 2002ರಲ್ಲಿ ಆರಂಭಗೊಂಡು ದೇಶದೆಲ್ಲೆಡೆ ತನ್ನದೇ ಶೈಲಿಯಲ್ಲಿ ಛಾಪು ಮೂಡಿಸಿರುವ `ಡೈರಿ ಡೇ' ಇದೀಗ ದೇಶದಲ್ಲೇ ಮೊದಲ ಬಾರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಐಸ್ ಕ್ರೀಮ್ ಮಾರುಕಟ್ಟೆಗೆ ಪರಿಚಯಿಸಿದೆ. `ಡೈರಿ ಡೇ ಪ್ಲಸ್' ಹೆಸರಿನಲ್ಲಿ ಐಸ್ ಕ್ರೀಮ್ ಗ್ರಾಹಕರಿಗೆ ಲಭ್ಯವಾಗಲಿದೆ.
ಡೈರಿ ಡೇ ಪ್ಲಸ್ ಐಸ್ ಕ್ರೀಮ್ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಸ್ತುಗಳನ್ನು ಒಳಗೊಂಡಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ವಸ್ತುಗಳು ಇಂದಿನ ದಿನಗಳಲ್ಲಿ ಅತ್ಯಂತ ಅಗತ್ಯವಾಗಿ ಬೇಕಾಗಿವೆ. ಈ ಸಾಲಿನಲ್ಲಿ ಡೈರಿ ಡೇ ಪ್ಲಸ್ ಉತ್ತಮ ಆಯ್ಕೆಯೂ ಹೌದು. ಸದ್ಯ ಮಾರುಕಟ್ಟೆಯಲ್ಲಿ ಹಳದಿ(ಅರಶಿನ) ಐಸ್ ಕ್ರೀಮ್ ಮತ್ತು ಚ್ಯವನ್ ಪ್ರಾಶ್ ಐಸ್ ಕ್ರಿಂ ಮಾದರಿಯಲ್ಲಿ ಲಭ್ಯವಿರಲಿದೆ.
ಇನ್ನು ಡೈರಿ ಡೇ ಪ್ಲಸ್ ಅಸಾಧಾರಣ ರುಚಿಯಿಂದ ಕೂಡಿದೆ. ಮತ್ತು ಸುರಕ್ಷಿತ ಹಾಗೂ ನೈರ್ಮಲ್ಯಯುತವಾಗಿ ತಯಾರಿಸಲಾಗಿರುವ ಉತ್ಪನ್ನವಾಗಿದೆ. ನೂತನ ಉತ್ಪನ್ನಗಳನ್ನು ಬಳಸಿಕೊಂಡು ಡೈರಿ ಡೇ ಪ್ಲಸ್ ಸಿದ್ದಗೊಂಡಿದ್ದು, ಗ್ರಾಹಕರ ಮನ ತಣಿಸುವ ರುಚಿಯನ್ನೊಳಗೊಂಡಿದೆ.
ರೋಗ ನಿರೋಧಕ ಶಕ್ತಿಯ ಐಸ್ ಕ್ರಿಮ್:
ಹಳದಿ ಐಸ್ ಕ್ರೀಮ್ ರೋಗ ನಿರೋಧ ಶಕ್ತಿಯನ್ನು ಹೆಚ್ಚಿಸುವ ಮೂರು ಬಗೆಯ ಉತ್ಪನ್ನಗಳನ್ನು ಒಳಗೊಂಡಿದೆ. ಇದರ ತಯಾರಿಕೆಯಲ್ಲಿ ಅರಶಿನ, ಮೆಣಸು ಹಾಗೂ ಜೇನುತುಪ್ಪ ಬಳಸಲಾಗಿದೆ. ಚ್ಯವನ್ ಪ್ರಾಶ್ ಐಸ್ ಕ್ರೀಮ್ ನಲ್ಲಿ ನೆಲ್ಲಿಕಾಯಿ, ಖರ್ಜೂರ ಮತ್ತು ಜೇನುತುಪ್ಪಗಳನ್ನು ಉಪ ಉತ್ಪನ್ನಗಳಾಗಿ ಬಳಸಿಕೊಳ್ಳಲಾಗಿದೆ. ಇದರೊಂದಿಗೆ ಹಾಲನ್ನು ಬಳಸಲಾಗಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮತ್ತಷ್ಟು ಪೂರಕವೆನಿಸಿದೆ.
ಕೃತಕ ಬಣ್ಣದ ಬಳಕೆ ಇಲ್ಲ:
ಇನ್ನು ಡೈರಿ ಡೇ ಪ್ಲಸ್ ಹಳದಿ ಹಾಗೂ ಚ್ಯವನ್ ಪ್ರಾಶ್ ಐಸ್ ಕ್ರೀಮ್ ನಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಕೆ ಮಾಡಿಲ್ಲ. ಪ್ರಾಕೃತಿಕವಾಗಿಯೇ ಖಚ್ಛ ವಸ್ತುಗಳಿಂದ ತಯಾರಿಸಿರುವ ಆರೋಗ್ಯಕರ ತಿನಿಸು ಇದಾಗಿದೆ. ಅಲ್ಲದೆ ಯಾವುದೇ ಕೃತಕ ಸ್ವಾದ ಇದ್ದಕ್ಕಿಲ್ಲ. ನೈಜವಾಗಿರುವ ಬಣ್ಣ ಹಾಗೂ ನೈಜ ರುಚಿಯಿಂದ ಡೈರಿ ಡೇ ಪ್ಲಸ್ ಐಸ್ ಕ್ರೀಮ್ ಕೂಡಿದೆ.
ಅಗ್ಗದ ದರದಲ್ಲಿ ಗ್ರಾಹಕರಿಗೆ ಲಭ್ಯ:
ಅರಶಿನ ಮತ್ತು ಚ್ಯವನ್ ಪ್ರಾಶ್ ಸ್ವಾದದ ಐಸ್ ಕ್ರೀಮ್ ಗಳು ಗ್ರಾಹಕರಿಗೆ ಕೈಗೆಟಕುವ ದರದಲ್ಲೇ ಲಭ್ಯವಾಗಲಿವೆ. 60 ಎಂ.ಎಲ್. ಕಪ್ ಗೆ 20 ರೂ.ಗಳನ್ನು ನಿರ್ಧರಿಸಲಾಗಿದೆ. 700ಎಂ.ಎಲ್. ಟೆಕ್ ಹೋಮ್ ಪ್ಯಾಕ್ ನ ಪರಿಚಯ ಮಾಡಲಾಗಿದ್ದು, ಇದರ ಬೆಲೆ 199 ರೂಪಾಯಿಗಳಾಗಿದೆ.
ಸಂಸ್ಥಾಪಕರ ಮಾತು:
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡೈರಿ ಡೇ ಸಂಸ್ಥಾಪಕ ಎಂ.ಎನ್. ಜಗನ್ನಾಥ್, ಡೈರಿ ಡೇ ತನ್ನ ನವೀನ ಸ್ವಾದಗಳಿಂದಲೇ ಹೆಸರುವಾಸಿಯಾಗಿದೆ. ಆಹಾರ ಸುರಕ್ಷತೆ, ನೈರ್ಮಲ್ಯಗಳಲ್ಲಿ ಅತ್ಯುತ್ತಮ ಮಾನದಂಡವನ್ನು ಡೈರಿ ಡೇ ಒಳಗೊಂಡಿದೆ. ಜನರು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಐಸ್ ಕ್ರೀಮ್ ತಯಾರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.