ನವದೆಹಲಿ, ಜೂ 19 (Daijiworld News/MSP): ಪೂರ್ವ ಲಡಾಖ್ನ ಗಾಲ್ವನ್ ಕಣಿವೆ ಪ್ರದೇಶದಲ್ಲಿ ಭಾರತೀಯ ಯೋಧರ ಮೇಲೆ ಚೀನಾ ಸೈನಿಕರು ನಡೆದುಕೊಂಡ ರೀತಿ ಪೂರ್ವಯೋಜಿತ ಎನ್ನುವುದಕ್ಕೆ ಸಾಕ್ಷಿಯೊಂದು ದೊರಕಿದ್ದು, ಇದಕ್ಕೆ ಸಂಬಂಧಿತ ರಕ್ಷಣಾ ವಿಶ್ಲೇಷಕರೊಬ್ಬರು ಹಂಚಿಕೊಂಡಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಚೀನಾ ಮೊದಲೇ ಸಂಚು ರೂಪಿಸಿ, ದೊಣ್ಣೆಗಳು , ಕಬ್ಬಿಣದ ಸರಳುಗಳಿಗೆ ಮೊಳೆಗಳನ್ನು ವೆಲ್ಡ್ ಮಾಡಿ ತಂದಿದ್ದು ಬರ್ಬರ ಹಲ್ಲೆ ನಡೆಸಿದ್ದರು. ಹೀಗಾಗಿಯೇ ಅಪಾರ ಸಾವು ನೋವಿಗೆ ಕಾರಣವಾಗಿತ್ತು ಬಿಬಿಸಿ ಸುದ್ದಿತಾಣ ವರದಿ ಮಾಡಿದೆ.
ರಕ್ಷಣಾ ವಿಶ್ಲೇಷಕ ಅಜಯ್ ಶುಕ್ಲಾ ಎಂಬುವರು ರಕ್ತಸಿಕ್ಕ ರಾಡ್ ನ ಫೋಟೋವನ್ನು ಹಂಚಿಕೊಂಡಿದ್ದು, ಚೀನಾ ಯೋಧರ ವರ್ತನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಲಡಾಖ್ ಬಳಿ ಚೀನಾ ಹಾಗು ಭಾರತೀಯ ಯೋಧರ ನಡುವೆ ಮಲ್ಲ ಯುದ್ದವೇ ನಡೆದಿದ್ದು, ಚೀನಾ ಯೋಧರು ಗಡಿಯಲ್ಲಿ ಹತ್ಯಾಕಾಂಡವನ್ನೇ ನಡೆಸಿದ್ದಾರೆ. ಈ ಘಟನೆ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಭಾರಿ ಸದ್ದು ಮಾಡುತ್ತಿದೆ.
ಇಷ್ಟೆಲ್ಲಾ ಉದ್ವಿಗ್ನ ಪರಿಸ್ಥಿತಿಯೂ ನಡುವೆಯೂ ಸುಮ್ಮನಾಗದ ಚೀನಾ ಗಡಿಯಲ್ಲಿ ಮತ್ತಷ್ಟು ಸೈನಿಕರನ್ನು ಜಮಾವಣೆಗೊಳಿಸಿ, ನಿರ್ಮಾಣ ಸಾಮಾಗ್ರಿ ಖರೀದಿಸಿದೆ ಎಂದು ಅಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.