ನವದೆಹಲಿ, ಜೂ 19 (DaijiworldNews/PY) : ನಾನು ನನ್ನ ಕಂಪೆನಿಯ ಷೇರುದಾರರಿಗೆ ನೀಡಿದ್ದ ಭರವಸೆಯ ಪ್ರಕಾರ ಮುಂದಿನ ವರ್ಷ ಮಾರ್ಚ್ 31, 2021ರ ಮೊದಲೇ ರಿಲಯನ್ಸ್ ಕಂಪೆನಿಯನ್ನು ಸಾಲಮುಕ್ತಗೊಳಿಸಿದ್ದೇನೆ ಎಂದು ಉದ್ಯಮಿ ಮುಕೇಶ್ ಅಂಬಾನಿ ಘೋಷಿಸಿದ್ದಾರೆ.
1.69 ಲಕ್ಷ ಕೋಟಿ ರೂ.ಅನ್ನು ಜಾಗತಿಕ ಮಟ್ಟದಲ್ಲಿ ಹೂಡಿಕೆದಾರರರಿಂದ ಸಂಗ್ರಹಿಸಿದ್ದರಿಂದ ಹಾಗೂ ಹಕ್ಕುಸ್ವಾಮ್ಯಗಳನ್ನು ಎರಡು ತಿಂಗಳಲ್ಲಿ ಬಗೆಹರಿಸಿಕೊಂಡ ಬಳಿಕ ರಿಲಯನ್ಸ್ ಇಂಡಸ್ಟ್ರೀಸ್ ಇಂದು ನಿವ್ವಳ ಸಾಲಮುಕ್ತವಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಎರಡು ತಿಂಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಜಾಗತಿಕ ಮಟ್ಟದ ತಂತ್ರಜ್ಞಾನ ಹೂಡಿಕೆ ಸಂಸ್ಥೆಗಳಿಗೆ ತನ್ನ ಡಿಜಿಟಲ್ ತಂತ್ರಜ್ಞಾನವಾದ ಜಿಯೊ ಫಾರ್ಮ್ಸ್ ಲಿಮಿಟೆಡ್ನ ಕಾಲು ಭಾಗ ಷೇರನ್ನು ಮಾರಾಟ ಮಾಡಿದ್ದು, ಸುಮಾರು 1.15 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿತ್ತು. ಅಲ್ಲದೇ, ಕಳೆದ 58 ದಿನಗಳಲ್ಲಿ 53 ಸಾವಿರದ 124.20 ಕೋಟಿ ರೂಪಾಯಿಗಳನ್ನು ಹಕ್ಕುಸ್ವಾಮ್ಯ ವಿಷಯಗಳಲ್ಲಿ ಸಂಗ್ರಹ ಮಾಡಿತ್ತು.
ಇಂಗ್ಲೆಂಡಿನ ಬಿಪಿ ಪಿಎಲ್ ಸಿಗೆ ಕಳೆದ ವರ್ಷ ಇಂಧನ ಚಿಲ್ಲರೆ ವ್ಯಾಪಾರದ ಶೇಕಡಾ 49 ಭಾಗವನ್ನು 7 ಸಾವಿರ ಕೋಟಿ ರೂಪಾಯಿಗೆ ಮಾರಾಟ ಮಾಡಿ ಒಟ್ಟು 1.75 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದು, ಮಾರ್ಚ್ 31ರ ಹೊತ್ತಿಗೆ ರಿಲಿಯನ್ಸ್ 1,61,035 ಕೋಟಿ ರೂಪಾಯಿ ನಿವ್ವಳ ಸಾಲವನ್ನು ಹೊಂದಿತ್ತು. ಅಲ್ಲದೇ ಕಳೆದ ಎಪ್ರಿಲ್ನಿಂದ ರಿಲಯನ್ಸ್ನ ಜಿಯೊ ಪ್ರಾಟ್ ಫಾರ್ಮ್ ನಡಿ ಫೇಸ್ ಬುಕ್, ವಿಸ್ಟಾ ಈಕ್ವಿಟಿ ಪಾರ್ಟ್ನರ್ಸ್, ಜನರಲ್ ಅಟ್ಲಾಂಟಿಕ್, ಸಿಲ್ವರ್ ಲೇಕ್, ಕೆಕೆಆರ್, ಮುಬಡಾಲಾ, ಎಲ್ ಕ್ಯಾಟ್ಟರ್ಟೊನ್, ಅಡಿಯಾ, ಟಿಪಿಜಿ ಹಾಗೂ ಪಿಐಎಫ್ ಸೇರಿ 95 ಕೋಟಿ ರೂಪಾಯಿ ಹೂಡಿಕೆ ಮಾಡಿವೆ.