ಬೆಂಗಳೂರ, ಜೂ 19 (Daijiworld News/MSP): ಕೊವೀಡ್ ಸೋಂಕಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಾದರೆ ಎಷ್ಟು ದರ ಪಡೆದುಕೊಳ್ಳಬೇಕು ಎನ್ನುವುದರ ಕುರಿತಂತೆ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ಈ ಚಿಕಿತ್ಸೆಗಾಗಿ ಈಗ ದರ ನಿಗದಿ ಮಾಡಲಾಗಿದೆ.
ದಿನವೊಂದಕ್ಕೆ ಜನರಲ್ ವಾರ್ಡ್ ಗೆ ಚಿಕಿತ್ಸಾ ವೆಚ್ಚ 5,200 ರೂ. ನಿಗದಿ ಮಾಡಲಾಗಿದ್ದು, ಐಸೋಲೇಶನ್ ವಾರ್ಡ್ ಗೆ ಪ್ರತಿ ದಿನಕ್ಕೆ 8,500 ರೂಪಾಯಿ ನಿಗದಿಪಡಿಸಲಾಗಿದೆ. ಹಾಗೇ ಐಸಿಯು ವಿತ್ ವೆಂಟಿಲೇಟರ್ ಗೆ 12,000 ರೂ. ನಿಗದಿಪಡಿಸಲಾಗಿದೆ.
ಸ್ವಾಬ್ ಟೆಸ್ಟ್ ಗೆ 2600 ರೂಪಾಯಿ ನಿಗದಿಪಡಿಸಲಾಗಿದ್ದು, ಜನರಲ್ ವಾರ್ಡ್ ವಿತ್ ಆಕ್ಸಿಜನ್ ಗೆ 7,500 ರೂಪಾಯಿ ನಿಗದಿಪಡಿಸಲಾಗಿದೆ.
ಜನಸಾಮಾನ್ಯರು ಹಾಗೂ ಖಾಸಗಿ ಆಸ್ಪತ್ರೆಯ ವೈದ್ಯರಿಂದ , ಸರ್ಕಾರವೇ ಚಿಕಿತ್ಸೆಯ ದರ ನಿಗದಿಗೊಳಿಸುವಂತೆ ಆಗ್ರಹ ಕೇಳಿಬಂದಿತ್ತು. ಇದೀಗ ಕೊರೊನಾ ಟಾಸ್ಕ್ ಪೋರ್ಸ್ ಸಭೆಯಲ್ಲಿ ದರ ನಿಗದಿಯಾಗಿದ್ದು , ಶೀಘ್ರವೇ ಸರ್ಕಾರದಿಂದ ಈ ಬಗ್ಗೆ ಅಧಿಕೃತ ಆದೇಶ ಹೊರಬೀಳಲಿದೆ.