ನವದೆಹಲಿ, ಜೂ 19 (DaijiworldNews/PY) : ಗಾಲ್ವಾನ್ ಕಣಿವೆಯಲ್ಲಿ ಚೀನಾ ನಡೆಸಿದ್ದ ದಾಳಿ ಪೂರ್ವ ನಿಯೋಜಿತವಾಗಿದೆ. ಕೇಂದ್ರ ಸರ್ಕಾರ ಗಾಢ ಸರ್ಕಾರ ನಿದ್ರೆಯಲ್ಲಿದ್ದ ಕಾರಣ ಯೋಧರು ಬೆಲೆ ತೆರಬೇಕಾಯಿತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕೆ ಮಾಡಿದ್ದಾರೆ.
ಚೀನಾ-ಭಾರತ ಗಡಿ ಪರಿಸ್ಥಿತಿ ಬಗ್ಗೆ ಪ್ರಧಾನಿ ಮೋದಿ ಅವರ ಸಭೆಯ ಮುನ್ನವೇ ರಾಹುಲ್ ಗಾಂಧಿ ಈ ಹೇಳಿಕೆಯನ್ನು ನೀಡಿದ್ದು, ಚೀನಾ ನಡೆಸಿದ ದಾಳಿ ಪೂರ್ವ ನಿಯೋಜಿತ ಎಂದು ಹೇಳಿರುವ ಕೇಂದ್ರ ರಕ್ಷಣಾ ಖಾತೆ ಸಚಿವ ಶ್ರೀಪಾದ್ ನಾಯಕ್ ಅವರ ಹೇಳಿಕೆಯನ್ನೂ ಅವರು ಟ್ವಿಟ್ಟರ್ನಲ್ಲಿ ಟ್ಯಾಗ್ ಮಾಡಿದ್ದಾರೆ.
ಬಗ್ಗೆ ಟ್ವೀಟ್ ಮಾಡಿರುವ ಅವರು, ಗಾಲ್ವಾನ್ ಕಣಿಯಲ್ಲಿ ಚೀನಾ ನಡೆಸಿದ್ದ ದಾಳಿ ಪೂರ್ವ ನಿಯೋಜಿತವಾಗಿದೆ. ಕೇಂದ್ರ ಸರ್ಕಾರ ಗಾಢ ನಿದ್ರೆಯಲ್ಲಿದ್ದು, ಗಡಿಯಲ್ಲಿ ಸಮಸ್ಯೆ ಇದೆ ಎನ್ನುವುದನ್ನು ಅಲ್ಲಗಳೆದಿತ್ತು. ಈಗ ಯೋಧರು ಬೆಲೆ ತೆರಬೇಕಾಯಿತು ಎಂದು ಬರೆದುಕೊಂಡಿದ್ದಾರೆ.
ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಕರ್ನಲ್ ಸೇರಿದಂತೆ ಭಾರತದ 20 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಇದು ಈ ಗಡಿ ಭಾಗದಲ್ಲಿ ನಡೆದ ಅತ್ಯಂತ ದೊಡ್ಡ ಸೇನಾ ಘರ್ಷಣೆಯಾಗಿದ್ದು, ಗಡಿ ವಿಚಾರದ ಬಿಕ್ಕಟ್ಟನ್ನು ಈ ಘಟನೆ ತಾರಕಕ್ಕೇರಿಸಿದೆ ಎಂದಿದ್ದಾರೆ.