ಬೆಂಗಳೂರು, ಜೂ.20 (DaijiworldNews/MB) : ಸಿಎಎ ವಿರುದ್ಧದ ಪ್ರತಿಭಟನೆ ಸಂದರ್ಭದಲ್ಲಿ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿ ದೇಶದ್ರೋಹ ಆರೋಪ ಹೊತ್ತಿರುವ ಅಮೂಲ್ಯ ಲಿಯೋನಾ ನರೋನಾ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ವಹಿಸಬೇಕು ಎಂದು ಮನವಿ ಮಾಡಿ ಮಂಡ್ಯದ ವಕೀಲ ಎಚ್. ಎಲ್. ವಿಶಾಲ ರಘು ಎಂಬವರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ನಿಗದಿ ಪಡಿಸಿದ ಅವಧಿಯಲ್ಲಿ ತನಿಖಾ ವರದಿ ಹಾಗೂ ದೋಷಾರೋಪ ಪಟ್ಟಿಯನ್ನು ಈ ಪ್ರಕರಣ ದಾಖಲು ಮಾಡಿರುವ ಉಪ್ಪಾರಪೇಟೆ ಪೊಲೀಸರು ಮತ್ತು ತನಿಖಾಧಿಕಾರಿ ನ್ಯಾಯಾಲಯಕ್ಕೆ ನೀಡಿಲ್ಲ. ಈ ಕಾರಣದಿಂದ ಅಮೂಲ್ಯಗೆ ಜಾಮೀನು ದೊರಕಿದೆ ಎಂದು ದೂರಿದ ಅರ್ಜಿದಾರರಾದ ವಕೀಲ ಎಚ್. ಎಲ್. ವಿಶಾಲ ರಘು ಅವರು, ತನಿಖಾಧಿಕಾರಿ ಅಮಾನತು ಮಾಡಲು ಮತ್ತು ಅಮೂಲ್ಯ ಜಾಮೀನು ವಜಾ ಮಾಡಲು ಅರ್ಜಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.
ಇನ್ನು ಈ ಅರ್ಜಿಯ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ.