ನವದೆಹಲಿ, ಜೂ 20 (Daijiworld News/MSP): ಪೂರ್ವ ಲಡಾಖ್ನ ವಾಸ್ತವ ಗಡಿ ರೇಖೆ ಬಳಿ ಭಾರತದ ಗಡಿಯೊಳಗೆ ಯಾರು ಪ್ರವೇಶಿಸಲಿಲ್ಲ, ಹಾಗೆಯೇ ನಮ್ಮ ಪೋಸ್ಟನ್ನು ಯಾರು ಅತಿಕ್ರಮಣ ಮಾಡಿಕೊಂಡಿಲ್ಲ ಎಂದು ಸರ್ವಪಕ್ಷಗಳೊಂದಿಗೆ ನಡೆಸಿದ ವರ್ಚ್ಯುವಲ್ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದು, ಈ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಹೇಳಿಕೆ ಕುರಿತು ಸಂಶಯ ವ್ಯಕ್ತಪಡಿಸಿರುವ ರಾಹುಲ್ ಟ್ವೀಟ್ ಮೂಲಕ ಪ್ರಧಾನಿಗೆ ಎರಡು ಪ್ರಶ್ನೆಗಳನ್ನು ಕೇಳಿ ಉತ್ತರಿಸಿ, ಅನುಮಾನ ಬಗೆಹರಿಸುವಂತೆ ಹೇಳಿದ್ದಾರೆ.
1.ಚೀನಾದವರು ಭಾರತದ ಭೂಭಾಗವನ್ನು ಪ್ರವೇಶಿಸಿಲ್ಲವೆಂದಾದರೆ ಚೀನಾ ಭೂ ಪ್ರದೇಶದಲ್ಲಿ ಭಾರತೀಯ ಸೈನಿಕರು ಹುತಾತ್ಮರಾಗಿದ್ದು ಹೇಗೆ?
2. ನಿಜಕ್ಕೂ ನಮ್ಮ ಯೋಧರು ಮೃತಪಟ್ಟ ಸ್ಥಳ ಯಾವುದು ?
ನಮ್ಮ ಗಡಿಯೊಳಗೆ ಯಾರು ಪ್ರವೇಶಿಸಿಲ್ಲ. ಒಂದಿಂಚೂ ಭೂಮಿ ನಾವು ಬಿಟ್ಟಿಲ್ಲ ಎಂದು ಪ್ರಧಾನಿ ಹೇಳಿದ್ದು ಹಾಗಿದ್ದರೆ ಪ್ರಧಾನಿ ಮಾತಿನ ಪ್ರಕಾರ ಸಂಘರ್ಷ ನಡೆದಿದ್ದು ಚೀನಾ ಭೂಪ್ರದೇಶದಲ್ಲಿ ಎಂದಾಯಿತು. ಹಾಗಿದ್ದರೆ ಅದ್ಯಾಕೆ ಚೀನಾ ಭೂ ಪ್ರದೇಶದಲ್ಲಿ ಭಾರತೀಯ ಸೈನಿಕರು ಹುತಾತ್ಮರಾದರು? ಎಂದು ಪ್ರಶ್ನಿಸಿ ಸರ್ಕಾರದ ವಿರುದ್ದ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ.