ಕತುವಾ, ಜೂ.20 (DaijiworldNews/MB) : ಶಸ್ತ್ರಾಸ್ತ್ರಗಳನ್ನು ಜೋಡಿಸಿ ಭಾರತಕ್ಕೆ ಕಳುಹಿಸಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಜಮ್ಮು ಕಾಶ್ಮೀರದ, ಅಂತರರಾಷ್ಟ್ರೀಯ ಗಡಿಗೆ ಹೊಂದಿಕೊಂಡಿರುವ ಕತುವಾ ಜಿಲ್ಲೆಯ ಪನ್ಸಾರ್ ಎಂಬಲ್ಲಿ ಶನಿವಾರ ಹೊಡೆದುರುಳಿಸಿದೆ.
ಮುಂಜಾನೆ ಸುಮಾರು 5.10ರ ವೇಳೆಗೆ ಈ ಡ್ರೋನ್ನ್ನು ನೋಡಿದ ಗಸ್ತಿನಲ್ಲಿದ್ದ ಬಿಎಸ್ಫ್ ಯೋಧರು ಡ್ರೋನ್ ಕಡೆಗೆ 9 ಸುತ್ತಿನ ಗುಂಡು ಹಾರಿಸಿ ಅದನ್ನು ಧ್ವಂಸ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇನ್ನು ಈ ಡ್ರೋನ್ ಕುರಿತಾಗಿ ತನಿಖೆ ನಡೆಸಲಾಗುತ್ತಿದ್ದು ಡ್ರೋನ್ನಲ್ಲಿ ಬಂದೂಕುಗಳು ಪತ್ತೆಯಾಗಿದೆ ಎಂದು ಎಎನ್ಐ ವರದಿ ತಿಳಿಸಿದೆ.