ನವದೆಹಲಿ, ಜೂ.20 (DaijiworldNews/MB) : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಕಳೆದ ಒಂದು ದಿನದಲ್ಲೇ 14,516 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು 375 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟಾರೆಯಾಗಿ 3,95,048 ಮಂದಿಗೆ ಕೊರೊನಾ ಸೋಂಕು ತಗುಲಿದ್ದು 12,948 ಮಂದಿ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ.
ಇನ್ನು ದೇಶದಲ್ಲಿ ಸೋಂಕು ಪ್ರಕಣಗಳು ಅಧಿಕವಾಗುತ್ತಿರುವ ನಡುವೆಯೂ ಕೊರೊನಾದಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಅಧಿಕವಾಗುತ್ತಿದ್ದು ಈವರೆಗೆ 2,13,831 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 1,68,269 ಪ್ರಕರಣಗಳು ಸಕ್ರಿಯವಾಗಿದೆ. ಕೊರೊನಾದಿಂದಾಗಿ ಶೇ.54.1 ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ.
ಇನ್ನು ದೇಶದಲ್ಲಿ ಅಧಿಕ ಕೊರೊನಾ ಪ್ರಕರಣಗಳು ದೃಢಪಟ್ಟಿರುವ ಮಹಾರಾಷ್ಟ್ರದಲ್ಲಿ 1,24,331 ಜನರಿಗೆ ಸೋಂಕು ತಗುಲಿದ್ದು 5,893 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. 62,773 ಮಂದಿ ಗುಣಮುಖರಾಗಿದ್ದು 55,665 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿ 8281 ಮಂದಿಗೆ ಸೋಂಕು ದೃಢಪಟ್ಟಿದ್ದು 124 ಮಂದಿ ಸಾವನ್ನಪ್ಪಿದ್ದಾರೆ. 2947 ಸಕ್ರಿಯ ಪ್ರಕರಣಗಳಾಗಿದ್ದು 5210 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ತಮಿಳುನಾಡಿನಲ್ಲಿ 54,449, ದೆಹಲಿಯಲ್ಲಿ 53,116, ಗುಜರಾತ್ನಲ್ಲಿ 26,141 , ಉತ್ತರ ಪ್ರದೇಶದಲ್ಲಿ 15785, ರಾಜಸ್ತಾನದಲ್ಲಿ 14156, ಮಧ್ಯಪ್ರದೇಶದಲ್ಲಿ 11582, ಪಶ್ಚಿಮ ಬಂಗಾಳದಲ್ಲಿ 13090 ಕೊರೊನಾ ಪ್ರಕರಣಗಳು ದಾಖಲಾಗಿದೆ.