ನವದೆಹಲಿ, ಜೂ.20 (DaijiworldNews/MB) : ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಸತತ 14ನೇ ದಿನವೂ ಏರಿಕೆಯಾಗಿದ್ದು ಈಗಾಗಲೇ ಕೊರೊನಾ ಕಾರಣದಿಂದಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಜನರಲ್ಲಿ ಆತಂಕ ಮನೆಮಾಡಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ಲೀಟರ್ಗೆ 51 ಪೈಸೆ ಏರಿಕೆಯಾಗಿದ್ದರೆ, ಡೀಸೆಲ್ 61 ಪೈಸೆ ಹೆಚ್ಚಳವಾಗಿದ್ದು ಪೆಟ್ರೋಲ್ 78.88 ರೂ. ಡೀಸೆಲ್ಗೆ 77.67 ರೂ. ಗೆ ಏರಿಕೆಯಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 57 ಪೈಸೆ ಏರಿದ್ದು ಡೀಸೆಲ್ ಬೆಲೆ 62 ಪೈಸೆ ಏರಿಕೆಯಾಗಿದೆ. ಹಾಗಾಗಿ ಪೆಟ್ರೋಲ್ ಬೆಲೆ 81.44 ರೂ. ಡೀಸೆಲ್ ಬೆಲೆ 73.86 ರೂ. ಆಗಿದೆ.
ಇನ್ನು ಈ 14 ದಿನಗಳಲ್ಲಿ ಪೆಟ್ರೋಲ್ ರೂ.5.88 ಹಾಗೂ ಡೀಸೆಲ್ ರೂ.6.50 ಏರಿಕೆಯಾದಂತಾಗಿದೆ.