ನವದೆಹಲಿ, ಜೂ 20 (DaijiworldNews/PY) : ವಾಸ್ತವ ಗಡಿ ರೇಖೆಗೆ ಸಂಬಂಧಪಟ್ಟಂತೆ ಚೀನಾದ ಉತ್ಪ್ರೇಕ್ಷೆಯಿಂದ ಕೂಡಿದ ಮಾತುಗಳು ಹಾಗೂ ಭೂಪ್ರದೇಶದ ಮೇಲಿನ ಹಕ್ಕುಮಂಡನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಭಾರತ ಹೇಳಿದೆ.
ಸಾಂದರ್ಭಿಕ ಚಿತ್ರ
ಚೀನಾ ಹೇಳಿಕೆಗೆ ಸಂಬಂಧಿಸಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ವಿದೇಶಾಂಗ ವ್ಯವಹಾರಗಳ ವಕ್ತಾರ ಅನುರಾಗ್ ಶ್ರೀವಾಸ್ತವ ಅವರು, ಐತಿಹಾಸಿಕವಾಗಿಯೂ ಗಾಲ್ವಾನ್ ಕಣಿವೆಗೆ ಸಂಬಂಧಪಟ್ಟ ಚಿತ್ರಣವು ಸ್ಪಷ್ಟವಾಗಿದೆ. ಚೀನಾದ ಪ್ರತಿಪಾದನೆಯನ್ನು ಒಪ್ಪಲು ಸಾಧ್ಯವಿಲ್ಲ. ತನ್ನದೇ ಆದ ಹಿಂದಿನ ನಿಲುವಿಗೆ ಆದೇಶ ಬದ್ದವಾಗಿಲ್ಲ. ಭಾರತೀಯ ಸೇನೆಯು ಚೀನಾ ಕಡೆಯಿಂದ ಆದ ಪ್ರಚೋದನೆಗೆ ಪ್ರತ್ಯುತ್ತರ ನೀಡಿದೆ ಎಂದು ತಿಳಿಸಿದ್ದಾರೆ.
ಭಾರತ-ಚೀನಾ ಸೇನಾಪಡೆಗಳ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಸೋಮವಾರ ರಾತ್ರಿ ನಡೆಸಿದ್ದ ಸಂಘರ್ಷದಲ್ಲಿ ಭಾರತದ ಒಬ್ಬ ಸೇನಾಧಿಕಾರಿ ಸೇರಿ 20 ಯೋಧರು ಹುತಾತ್ಮರಾಗಿದ್ದರು. ಚೀನಾವು ಇದರ ಬೆನ್ನಲೇ ಗಾಲ್ವಾನ್ ಕಣಿವೆಯ ಮೇಲಿನ ಸಾರ್ವಭೌಮತೆಯನ್ನು ಪ್ರತಿಪಾದನೆ ಮಾಡಿತ್ತು. ಅಲ್ಲದೇ, ನಾವು ಗಾಲ್ವಾನ್ ಕಣಿವೆಯ ವಿಚಾರವಾಗಿ ರಾಜತಾಂತ್ರಿಕ ಮಾರ್ಗದಲ್ಲಿ ಮಾತುಕತೆ ನಡೆಸಿದ್ದೇವೆ. ಚೀನಾಕ್ಕೆ ಸೇರಿರುವ ಜಾಗದಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಚೀನಾವನ್ನು ದೂರಬೇಕಾಗಿಲ್ಲ ಎಂಬುದಾಗಿ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಝಾವೊ ಲಿಜಿಯಾನ್ ಹೇಳಿದ್ದರು.