ಬೆಂಗಳೂರು, ಜೂ.21 (DaijiworldNews/MB) : ರಾಜ್ಯದಲ್ಲಿ ಭಾನುವಾರ ಬೆಳಗ್ಗೆ 10.12ರಿಂದ ಮಧ್ಯಾಹ್ನ 1.31ರವರೆಗೆ ಸೂರ್ಯಗ್ರಹಣ ಕಾಣಿಸಲಿದ್ದು ಉತ್ತರ ಭಾರತದ ರಾಜಸ್ಥಾನ, ಹರಿಯಾಣ, ಉತ್ತರಾಖಂಡದ ಕೆಲವ ಭಾಗಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಗೋಚರಿಸಿದರೆ ದಕ್ಷಿಣ ಭಾರತದಲ್ಲಿ ಪಾರ್ಶ್ವ ಸೂರ್ಯಗ್ರಹಣ ಗೋಚರಿಸಿಲಿದೆ.
ಆಫ್ರಿಕಾ, ಆಗ್ನೇಯ ಯುರೋಪ್, ಮಧ್ಯ ಪ್ರಾಚ್ಯ, ಉತ್ತರ, ಪೂರ್ವ ರಷ್ಯಾ ಹೊರತುಪಡಿಸಿ ಏಷ್ಯಾ, ಇಂಡೊನೇಷ್ಯ ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ಸೂರ್ಯಗ್ರಹಣ ಕಾಣಿಸಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ನಗರದ ಜವಾಹರಲಾಲ್ ನೆಹರೂ ತಾರಾಲಯ, ಈ ವರ್ಷ ಕೊರೊನಾ ಕಾರಣದಿಂದಾಗಿ ಗ್ರಹಣ ವೀಕ್ಷಣೆಗೆ ಯಾವುದೇ ವ್ಯವಸ್ಥೆ ಮಾಡಿಲ್ಲ. ತಾರಾಲಯದ ವೆಬ್ಸೈಟ್, ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನಲ್ನಲ್ಲಿ ಸೂರ್ಯ ಗ್ರಹಣದ ವಿಡಿಯೋವನ್ನು ವೀಕ್ಷಿಸಬಹುದಾಗಿದೆ. ಇದು 11.47ರ ಸಮಯಕ್ಕೆ ಶೇಕಡ 40ರಷ್ಟು ಕಾಣಿಸಿಕೊಳ್ಳಲಿದ್ದು ಬರಿಗಣ್ಣಿನಿಂದ ವೀಕ್ಷಿಸುವುದು ಅಪಾಯಕಾರಿ. ಗ್ರಹಣ ವೀಕ್ಷಣೆಗೆ ಬಳಸುವ ಕನ್ನಡಕ ಬಳಸಿ ವೀಕ್ಷಿಸಬಹುದು ಎಂದು ತಿಳಿಸಿದೆ.
ಇನ್ನು ಗ್ರಹಣ ಕಾರಣದಿಂದಾಗಿ ರಾಜ್ಯದ ಹಲವು ದೇವಾಲಯಗಳು ಮುಚ್ಚಿರಲಿವೆ.