ಶೋಪಿಯಾನ್, ಜೂ.21 (DaijiworldNews/MB) : ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಲಾಕಿಪುರ್ನಲ್ಲಿ ಮತ್ತೋರ್ವ ಉಗ್ರನನ್ನು ಭಾರತೀಯ ಸೇನಾಪಡೆ ಹತ್ಯೆ ಮಾಡಿದೆ.
ಸುಮಾರು ವಾರಗಳಿಂದಲ್ಲೇ ಭಾರತೀಯ ಸೇನಾಪಡೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಉಗ್ರರ ಬೇಟೆ ಮಾಡುತ್ತಿದ್ದು ಇದೀಗ ಶೋಪಿಯಾನ್ ಜಿಲ್ಲೆಯ ಲಾಕಿಪುರ್ನಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಮಾಡಿದ್ದು ಒರ್ವ ಉಗ್ರನನ್ನು ಹೊಡೆದುರುಳಿಸಿದೆ.
ಸೇನಾಪಡೆಯು ಹತ್ಯೆಯಾದ ಉಗ್ರನಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು ಕಾರ್ಯಾಚರಣೆ ಮುಂದವರೆದಿದೆ ಎಂದು ವರದಿಯಾಗಿದೆ.
ಏತನ್ಮಧ್ಯೆ ಜಮ್ಮು ಮತ್ತು ಕಾಶ್ಮೀರದ ಸೊಪೋನಾದಲ್ಲಿ ಪೊಲೀಸರು ಹಾಗೂ ಸಿಆರ್ಪಿಎಫ್ ಯೋಧರು ಶಬೀರ್ ಅಹ್ಮದ್ ಮಿರ್, ಮೊಹಮ್ಮದ್ ಅಬ್ಬಾರ್ ಮಿರ್ ಹಾಗೂ ಫಾಹಿಮ್ ನಬಿ ಭಟ್ ಎಂಬ ಮೂವರು ಎಲ್ಇಟಿ ಉಗ್ರ ಸಂಘಟನೆಯ ಸಹಚರರನ್ನು ಬಂಧಿಸಿ ಶಸ್ತ್ರಾಸ್ತ್ರಗಳು, ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.