ನವದೆಹಲಿ, ಜೂ.21 (DaijiworldNews/MB) : ಚೀನಾ-ಭಾರತ ಸೇನಾಪಡೆಗಳ ನಡುವೆ ಘರ್ಷಣೆಯಾಗಿದ್ದ ಲಡಾಖ್ನ ಚೀನಾ-ಭಾರತ ಗಡಿಗೆ ಶೀಘ್ರವೇ 2,000 ಐಟಿಬಿಪಿ ಪಡೆಗಳು ರವಾನೆ ಮಾಡುವ ಸಾಧ್ಯತೆಯಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಅಧಿಕಾರಿಯೊಬ್ಬರು, ಲಡಾಖ್ನಲ್ಲಿ ಉಂಟಾದ ಪ್ರಕ್ಷುಬ್ಧ ಸ್ಥಿತಿಯ ನಿಟ್ಟಿನಲ್ಲಿ ದೇಶದ ಬೇರೆ ಬೇರೆ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಐಟಿಬಿಪಿ ಸಿಬ್ಬಂದಿಗಳನ್ನು ಗಡಿಯಲ್ಲಿ ನಿಯೋಜನೆಯಾಗಲು ಸೂಚಿಸಲಾಗಿದ್ದು 20 ಹೆಚ್ಚುವರಿ ಕಂಪನಿಗಳು ಅಂದರೆ 2,000 ಪಡೆಗಳು ನಿಯೋಜನೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.