ನವದೆಹಲಿ, ಜೂ 21 (DaijiworldNews/PY) : ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಸತತ 15ನೇ ದಿನವೂ ಏರಿಕೆಯಾಗಿದ್ದು, ಭಾನುವಾರ ಡೀಸೆಲ್ ಪ್ರತಿ ಲೀಟರ್ಗೆ 60 ಪೈಸೆ ಹಾಗೂ ಪೆಟ್ರೋಲ್ ಪ್ರತಿ ಲೀಟರ್ಗೆ 35 ಪೈಸೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 81.81 ಆಗಿದ್ದು, ಡೀಸೆಲ್ ಬೆಲೆ 74.43 ಆಗಿದೆ. ನವದೆಹಲಿಯಲ್ಲಿ ಪೆಟ್ರೋಲ್ ದರ 79.23 ಏರಿಕೆಯಾಗಿದ್ದರೆ, ಡೀಸೆಲ್ ದರ 77.67 ಹೆಚ್ಚಳವಾಗಿದೆ. ಮುಂಬೈನಲ್ಲಿ ಪೆಟ್ರೋಲ್ ದರ 86.06 ಆಗಿದ್ದರೆ, ಡೀಸೆಲ್ ದರ 76.69 ಆಗಿದೆ.
ಕಳೆದ ಎರಡು ವಾರಗಳಲ್ಲಿ ಒಟ್ಟಾರೆ ಪೆಟ್ರೋಲ್ ದರ 7.97 ಹಾಗೂ ಡೀಸೆಲ್ ದರ 8.88 ಏರಿಕೆಯಾಗಿದೆ.
ಪೆಟ್ರೋಲ್ಗೆ ಕೇಂದ್ರದ ತೆರಿಗೆ 32.98 ಹಾಗೂ ಸ್ಥಳೀಯ ಮಾರಾಟ ತೆರಿಗೆ 17.71 ಸೇರಿ 50.69 ಹೆಚ್ಚುವರಿ ಹೊರೆ ಗ್ರಾಹಕನ ಮೇಲೆ ಬೀಳುತ್ತಿದೆ. ಇದರೊಂದಿಗೆ ಡೀಸೆಲ್ ಮಾರಾಟದಲ್ಲಿಯೂ ಶೇ.63ರಷ್ಟು ತೆರಿಗೆ ಒಳಗೊಂಡಿದ್ದು, ಕೇಂದ್ರದ ತೆರಿಗೆ 31.83 ಆಗಿದ್ದು, ಸ್ಥಳೀಯ ತೆರಿಗೆ 17.69 ಸೇರಿ 49.43 ಹೆಚ್ಚುವರಿ ಹೊರೆ ಗ್ರಾಹಕನ ಮೇಲೆ ಬೀಳುತ್ತಿದೆ.