ಬೆಂಗಳೂರು, ಜೂ.21 (DaijiworldNews/MB) : ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ 'ಎ' ದರ್ಜೆ ದೇವಸ್ಥಾನಗಳ ವತಿಯಿಂದ ಏರ್ಪಡಿಸುವ ಸಪ್ತಪದಿ ಯೋಜನೆಯ ಮುಹೂರ್ತವನ್ನು ಸರ್ಕಾರ ನಿಗದಿ ಮಾಡಿದೆ ಎಂದು ವರದಿ ತಿಳಿಸಿದೆ.
ಕಳೆದ ಏಪ್ರಿಲ್ 26 ಮತ್ತು ಮೇ 24ರಂದು ಸಪ್ತಪದಿ ಯೋಜನೆಯಡಿಯಲ್ಲಿ ವಿವಾಹಗಳು ನಡೆಯಬೇಕಿದ್ದು ಕೊರೊನಾ ಕಾರಣದಿಂದ ಮುಂದೂಡಲಾಗಿತ್ತು. ಇದೀಗ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಮುಹೂರ್ತವನ್ನು ಸರ್ಕಾರ ನಿಗದಿ ಮಾಡಿದೆ.
ಹಾಗೆಯೇ ಕಳೆದ ಮಾರ್ಚ್ ತಿಂಗಳಿನಲ್ಲಿ ವಿವಾಹಕ್ಕೆ ನೋಂದಾವಣೆ ಮಾಡಿಕೊಂಡಿದ್ದ ವಧು, ವರರನ್ನು ಸಂಪರ್ಕಿಸಿ ಅವರಿಂದ ಒಪ್ಪಿಗೆ ಪತ್ರ ಪಡೆದು ನಿಗಿದ ಪಡಿಸಿದ ದಿನದಂದ ಸಾಮೂಹಿಕ ವಿವಾಹ ಆಯೋಜಿಸಲು ಕ್ರಮ ತೆಗೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.