ನವದೆಹಲಿ, ಜೂ 21 (DaijiworldNews/PY) : ಆರೋಗ್ಯ ಕಾರ್ಯಕರ್ತರಿಗೆ ಜಾರಿಗೊಳಿಸಲಾಗಿದ್ದ 50 ಲಕ್ಷ ವಿಮಾ ಯೋಜನೆಯನ್ನು ಸೆಪ್ಟೆಂಬರ್ವರೆಗೆ ಕೇಂದ್ರ ಸರ್ಕಾರ ವಿಸ್ತರಣೆ ಮಾಡಿದೆ.
ಸಾಂದರ್ಭಿಕ ಚಿತ್ರ
ನ್ಯೂ ಇಂಡಿಯಾ ಅಶ್ಯೂರೆನ್ಸ್ ವಿಮಾ ಕಂಪನಿ ಮೂಲಕ ಸುಮಾರು 22.12 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಜಾರಿಗೊಳಿಸಲಾಗಿದ್ದ ಈ ಯೋಜನೆಯು ಜೂನ್ 30ಕ್ಕೆ ಮುಕ್ತಾಯವಾಗುವುದಿತ್ತು. ಆದರೆ, ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಈ ಯೋಜನೆಯನ್ನು ಸರ್ಕಾರ ವಿಸ್ತರಣೆ ಮಾಡಲು ತೀರ್ಮಾನಿಸಿದೆ.
ಈ ಯೋಜನೆಗೆ ಮಾರ್ಚ್ 30ರಿಂದ ಚಾಲನೆ ದೊರೆತಿದ್ದು, ಈ ಯೋಜನೆಯನ್ನು ಕೊರೊನಾ ವೈರಸ್ ಸೋಂಕಿತರ ಆರೈಕೆ ಮಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗಾಗಿ ಪ್ರಾರಂಭ ಮಾಡಲಾಗಿತ್ತು. ರಾಜ್ಯ ಸರ್ಕಾರಗಳ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ವೈದ್ಯರು, ನರ್ಸ್ಗಳು ಈ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿದ್ದಾರೆ.