ನವದೆಹಲಿ, ಜೂ 21 (DaijiworldNews/PY) : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗಲ್ವಾನ್ ಕಣಿವೆ ವಿಚಾರದಲ್ಲಿ ಪ್ರಧಾನಿ ಮೋದಿ ಅವರ ಮೇಲೆ ಮತ್ತೆ ವಾಗ್ದಾಳಿ ನಡೆಸಿದ್ದು, ನರೇಂದ್ರ ಮೋದಿ ನಿಜವಾಗಿಯೂ ಸರೆಂಡರ್ ಮೋದಿ, ಚೀನೀಯರಿಗೆ ಭಾರತ ಭೂಪ್ರದೇಶವನ್ನು ಒಪ್ಪಿಸಿ ಶರಣಾಗಿದ್ದಾರೆ ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ನಿಜವಾಗಿಯೂ ಸರೆಂಡರ್ ಮೋದಿ ಎಂದು ಟೀಕೆ ಮಾಡಿದ್ದಾರೆ. ಅಲ್ಲದೇ, ಚೀನೀಯರಿಗೆ ಭಾರತ ಭೂಪ್ರದೇಶವನ್ನು ಒಪ್ಪಿಸಿ ಶರಣಾಗಿದ್ದಾರೆ ಎಂದಿದ್ದಾರೆ.
ಕಳೆದ ಸೋಮವಾರ ಭಾರತ-ಚೀನಾ ಗಡಿಯ ಪೂರ್ವ ಲಡಾಕ್ನಲ್ಲಿ ನಡೆದ ಘರ್ಷಣೆಯಲ್ಲಿ 20 ಮಂದಿ ಯೋಧರು ಹುತಾತ್ಮರಾಗಿದ್ದರು. ಈ ಘಟನೆಯಾದ ಬಳಿಕ ಕಾಂಗ್ರೆಸ್ ಕೇಂದ್ರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಾಗ್ದಾಳಿ ನಡೆಸುತ್ತಲೇ ಇದೆ.