ನವದೆಹಲಿ, ಜೂ.22 (DaijiworldNews/MB) : ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ದಾಖಲೆಯನ್ನು ಹೊಂದಿರುವ ಮಾಜಿ ಎಡಗೈ ಸ್ಪಿನ್ನರ್ ರಾಜಿಂದರ್ ಗೋಯಲ್ (77) ಭಾನುವಾರ ವಯೋ ಸಹಜ ಕಾಯಿಲೆಗಳಿಂದ ನಿಧನರಾದರು.
ಗೋಯಲ್ ಅವರು ಸೆಪ್ಟೆಂಬರ್ 20, 1942 ರಂದು ಹರಿಯಾಣದ ನರ್ ವನಾದಲ್ಲಿ ಜನಿಸಿದ್ದು ಪ್ರಥಮ ದರ್ಜೆ ವೃತ್ತಿಜೀವನದಲ್ಲಿ ಪಟಿಯಾಲ, ಹರಿಯಾಣ, ಪಂಜಾಬ್, ದೆಹಲಿ ಮತ್ತು ಉತ್ತರ ವಲಯ ಪರ ಆಡಿದ್ದರು.
ಇವರು 157 ಪಂದ್ಯಗಳಲ್ಲಿ 750 ವಿಕೆಟ್ಗಳನ್ನು 18.58 ಸರಾಸರಿಯಲ್ಲಿ ಪಡೆದಿದ್ದು ತಮ್ಮ ಜೀವಮಾನದ ಸಾಧನೆಗಾಗಿ 2017 ರಲ್ಲಿ ಗೋಯೆಲ್ ಅವರಿಗೆ ಸಿಕೆ ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಗೋಯಲ್ ಅವರು ಪತ್ನಿ ಮತ್ತು ಮಗ ನಿತಿನ್ ಗೋಯಲ್ ಅವರನ್ನು ಅಗಲಿದ್ದಾರೆ.