ನವದೆಹಲಿ,ಜೂ 22 (Daijiworld News/MSP): ಪೂರ್ವ ಲಡಾಕ್ ಮತ್ತು ಇತರ ಪ್ರಾಂತ್ಯಗಳಲ್ಲಿ ಚೀನಾ ನಡೆಸುತ್ತಿರುವ ಯಾವುದೇ ಕಿಡಿಗೇಡಿತನಕ್ಕೆ ತಕ್ಕ ಉತ್ತರ ನೀಡಲು ಭಾರತೀಯ ಪಡೆಗಳನ್ನು ಸಂಪೂರ್ಣವಾಗಿ ಸಿದ್ಧಪಡಿಸುವಂತೆ ಆದೇಶ ನೀಡಲಾಗಿದೆ ಇದರೊಂದಿಗೆ ಚೀನಾದ ಪೀಪಲ್ಸ್ ಲಿಬರೇಷನ್ ಸೈನ್ಯಕ್ಕೆ ತಕ್ಕ ಉತ್ತರ ನೀಡಲು ಮುಂದಾಗಿರುವ ಭಾರತವೂ ಸೇನೆಗೆ 500 ಕೋಟಿ ರೂಗಳ ವರೆಗೂ ತುರ್ತು ಶಸ್ತ್ರಾಸ್ತ್ರ ಖರೀದಿಗೂ ಒಪ್ಪಿಗೆ ನೀಡಿದೆ.
ಚೀನದ ಕುಂತತ್ರ ಬುದ್ದಿಗೆ ತಕ್ಕ ಪಾಠ ಕಲಿಸಿರುವ ಭಾರತೀಯ ಯೋಧರಿಗೆ ಮತ್ತಷ್ಟು ಆತ್ಮಸ್ಥೈರ್ಯ ತುಂಬಲು ಆರ್ಥಿಕ ಬಲದ ಸಾಥ್ ನೀಡಿದ್ದು ಸೇನೆಗೆ ಶಸ್ತ್ರಾಸ್ತ್ರ ಬಳಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಕೇಂದ್ರವೂ ಇದೀಹ ತುರ್ತಾಗಿ ಮೂರು ಸೇನೆಗಳಿಗೆ 500 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದ್ದು, ಅತ್ಯಾಧುನಿಕ ಆಯುಧಗಳನ್ನ ಖರೀದಿಸಲು ಅನುಮತಿ ನೀಡಿದೆ. ಇದು ರಣೋತ್ಸಾಹದಲ್ಲಿರುವ ಭಾರತೀಯ ಸೈನಿಕರಿಗೆ ಮತ್ತಷ್ಟು ಆತ್ಮಸ್ಥೈರ್ಯ ತುಂಬಿದಂತಾಗಿದೆ.
ಈಗಾಗಲೇ ಸೇನೆಗೆ ನೀಡಲಾಗಿರುವ ಬಜೆಟ್ನಲ್ಲಿ ಭಾರತೀಯ ವಾಯುಸೇನೆ ಇಸ್ರೇಲ್ ನಿರ್ಮಿತ ಸ್ಪೈಸ್ 2000 ಬಾಂಬ್, ಅಮೆರಿಕ ನಿಖರ-ನಿರ್ದೇಶಿತ ಯುದ್ಧಸಾಮಗ್ರಿಗಳು,ಇದರೊಂದಿಗೆ ನೌಕಾಪಡೆಗೆ ಬೇಕಾದ ಹಲವು ಬಗೆಯ ಯುದ್ಝನೌಕೆಗಳು ಮುಂಬೈ ಡಾಕ್ ಯಾರ್ಡ್ ನಲ್ಲಿ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ
ಇದರೊಂದಿಗೆ ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆ ಬಳಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿರುವ ಸಂದರ್ಭದಲ್ಲಿ ಮಾತುಕತೆ ಮೂಲಕ ಬಗೆಹರಿಸಲು ಚೀನಾ - ಭಾರತ ಎರಡೂ ದೇಶಗಳು ಸಜ್ಜಾಗಿದ್ದು ಈ ವಾರ ಮಾತುಕತೆಗೆ ಮುಹೂರ್ತ ನಿಗದಿಯಾಗಿದೆ.