ಕೊಯಮತ್ತೂರು, ಜೂ.22 (DaijiworldNews/MB) : 7 ನೇ ತರಗತಿಯ ವಿದ್ಯಾರ್ಥಿನಿ 11 ವರ್ಷದ ಬಾಲಕಿಯನ್ನು ಮೂವರು ಬಾಲಕರು ಅಶ್ಲೀಲ ವಿಡಿಯೋ ನೋಡುವಂತೆ ಒತ್ತಾಯಿಸಿ ಬಳಿಕ ನಿರಂತರವಾಗಿ ಅತ್ಯಾಚಾರ ಮಾಡಿದ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.
ಈ ಮೂವರು ಬಾಲಕರ ಪೈಕಿ ಇಬ್ಬರನ್ನು ಬಂಧಿಸಲಾಗಿದ್ದು ಇನ್ನೋರ್ವ ಆರೋಪಿಯನ್ನು ಪತ್ತೆ ಹಚ್ಚಲಾಗುತ್ತಿದೆ.
ತಾಯಿಯನ್ನು ಕಳೆದುಕೊಂಡಿರುವ ಈ ಬಾಲಕಿ ತನ್ನ ಚಿಕ್ಕಮ್ಮ ಹಾಗೂ ತಂದೆಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು ಮನೆಯ ಮಾಲೀಕರ ಮನೆಗೆ ಟಿವಿ ನೋಡಲೆಂದು ಹೋಗುತ್ತಿದ್ದಳು. ಮನೆಯ ಮಾಲೀಕರು ಹಾಗೂ ಅವರ ಪತ್ನಿಯು ಕೆಲಸದಲ್ಲಿ ಇರುವ ಕಾರಣ ಹೆಚ್ಚಾಗಿ ಮನೆಯಲ್ಲಿ ಅವರ ಪುತ್ರ ಎಸ್ಎಸ್ಎಲ್ಸಿ ವಿದ್ಯಾರ್ಥಿ 16 ವರ್ಷದ ಶರ್ಮಾನ್ (ಹೆಸರು ಬದಲಿಸಲಾಗಿದೆ) ಇರುತ್ತಿದ್ದನು.
ಶರ್ಮಾನ್ಗೆ ಆನ್ಲೈನ್ ತರಗತಿ ಹಾಜರಾಗಲೆಂದು ಪೋಷಕರು ಮೊಬೈಲ್ ನೀಡಿದ್ದರು. ಮೇ 20 ರಂದು ಈ ಮೊಬೈಲ್ನಲ್ಲಿ ಶರ್ಮಾನ್ ಸ್ನೇಹಿತ 17 ವರ್ಷದ ಕುನಾಲ್ (ಹೆಸರು ಬದಲಾಯಿಸಲಾಗಿದೆ) ಮನೆಯಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದ ಸಂದರ್ಭದಲ್ಲಿ ಬಾಲಕಿ ಟಿವಿ ನೋಡಲೆಂದು ಮನೆಗೆ ಬಂದಿದ್ದು ಇವರು ಅಶ್ಲೀಲ ವಿಡಿಯೋ ನೋಡುವುದನ್ನು ಗಮನಿಸಿ ಅಲ್ಲಿಂದ ಮನೆಗೆ ಹಿಂದಿರುಗಿ ಬರಲು ಹೊರಟಿದ್ದಳು. ಈ ವೇಳೆ ಬಾಲಕರಿಬ್ಬರು ಬಾಲಕಿಯನ್ನು ಮನೆಗೆ ಹೋಗದಂತೆ ತಡೆಹಿಡಿದು ಅಶ್ಲೀಲ ವಿಡಿಯೋ ನೋಡುವಂತೆ ಒತ್ತಾಯಿಸಿದರು. ಬಳಿಕ ಆಕೆ ತಾನು ವಾಸವಿರುವ ಮೊದಲ ಫ್ಲೋರ್ನ ಮನೆಗೆ ತೆರಳಿದ್ದಳು.
ಈ ಇಬ್ಬರು ಬಾಲಕರು ಆಕೆಯನ್ನು ಹಿಂಬಾಳಿಸಿ ಆಕೆಯ ಮನೆಯಲ್ಲೇ ಅನೇಕ ಬಾರಿ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ತಮ್ಮ ಮತ್ತೋರ್ವ ಗೆಳೆಯನನ್ನು ಕರೆದಿದ್ದು ಮೂವರು ಸೇರಿ ಬಾಲಕಿಗೆ ಅಶ್ಲೀಲ ವಿಡಿಯೋ ನೋಡುವಂತೆ ಒತ್ತಾಯಿಸಿದ್ದಾರೆ.
ಈ ಮೂವರು ಆರೋಪಿಗಳು ಒಂದು ವಾರದಲ್ಲಿ ಬಾಲಕಿಯ ಮನೆಗೆ ತೆರಳಿ ಅನೇಕ ಬಾರಿ ಅತ್ಯಾಚಾರ ಮಾಡಿದ್ದು ಇದನ್ನು ಯಾರಿಗೂ ಬಹಿರಂಗಪಡಿಸದಂತೆ ಆಕೆಗೆ ಬೆದರಿಕೆ ಹಾಕಿದ್ದರು.