ತುಮಕೂರು, ಜೂ.22 (DaijiworldNews/MB) : ಮದುವೆ ಮನೆಯ ಅಡುಗೆಯಾತನಿಗೆ ಕೊರೊನಾ ದೃಢಪಟ್ಟ ಕಾರಣ ವಿವಾಹವಾದ 24 ಗಂಟೆಯೊಳಗೆಯೇ ನವ ಜೋಡಿಯು ಕ್ವಾರಂಟೈನ್ಗೆ ಒಳಗಾದ ಘಟನೆ ಜಿಲ್ಲೆಯ ಗುಬ್ಬಿಯ ಹೇರೂರಿನಲ್ಲಿ ನಡೆದಿದೆ.
ಹೇರೂರಿನ ವರ ಗಿರೀಶ್ಗೆ ಕಾಟೇನಹಳ್ಳಿಯ ವಧು ಮೀನಾಕ್ಷಿಯ ಜೊತೆ ವಿವಾಹವಾಗಿದ್ದು ಈ ವಿವಾಹದಲ್ಲಿ ಅಡುಗೆ ಮಾಡಲು ಬಂದ ಚಿಟ್ಟದ ಕುಪ್ಪೆ ನಿವಾಸಿ 50 ವರ್ಷದ ಅಡುಗೆಯಾತನಿಗೆ ಕೊರೊನಾ ಪಾಸಿಟಿವ್ ಆದ ಕಾರಣಕ್ಕೆ ಆ ವಿವಾಹಕ್ಕೆ ಬಂದ ಎಲ್ಲರನ್ನೂ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ಈತನು ಜೂನ್ 14 ರಂದು ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದು ಅವರನ್ನು ಅಧಿಕಾರಿಗಳು ಕ್ವಾರಂಟೈನ್ಗೆ ಒಳಪಡಿಸಿಲ್ಲ ಎಂದು ದೂರಲಾಗಿದ್ದು ಅವರು ಹಲವು ಕಡೆಗಳಲ್ಲಿ ಅಡುಗೆ ಕೆಲಸ ಮಾಡಿದ್ದನು ಎಂದು ಹೇಳಲಾಗಿದೆ. ಜೂನ್ 18 ರಂದು ಈತನ ವರದಿ ಪಾಸಿಟಿವ್ ಬಂದಿದ್ದು ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಆತ ಅಡುಗೆ ಕೆಲಸ ನಿರ್ವಹಿಸುತ್ತಿದ್ದ ಮದುವೆ ಮನೆಗೆ ದಾಳಿ ಮಾಡಿ ಒಟ್ಟು 56 ಜನರನ್ನು ಕ್ವಾರಂಟೈನ್ಗೆ ಒಳಪಡಿಸಿದ್ದಾರೆ.