ನವದೆಹಲಿ, ಜೂ.22 (DaijiworldNews/MB) : ದೇಶದಲ್ಲಿ ಸತತ 11 ದಿನವೂ ಹತ್ತು ಸಾವಿರಕ್ಕಿಂತ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗಿದ್ದು ಕಳೆದ 24 ಗಂಟೆಗಳಲ್ಲಿ 14,821 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 4,25,282ಕ್ಕೆ ಏರಿಕೆಯಾಗಿದೆ. ಒಂದು ದಿನದಲ್ಲೇ 445 ಮಂದಿ ಕೊರೊನಾಗೆ ಬಲಿಯಾಗಿದ್ದು ಈವರೆಗೆ 13,699 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.
445 ಮಂದಿ ಮೃತರ ಪೈಕಿ ಮಹಾರಾಷ್ಟ್ರದಲ್ಲಿ 186 ಮಂದಿ, ದೆಹಲಿಯಲ್ಲಿ 63, ತಮಿಳುನಾಡಿನಲ್ಲಿ 53, ಉತ್ತರ ಪ್ರದೇಶದಲ್ಲಿ 43, ಗುಜರಾತ್ನಲ್ಲಿ 25, ಪಶ್ಚಿಮ ಬಂಗಾಳದಲ್ಲಿ 15, ಮಧ್ಯಪ್ರದೇಶದಲ್ಲಿ 14, ರಾಜಸ್ಥಾನದಲ್ಲಿ 12, ಹರಿಯಾಣದಲ್ಲಿ 11, ತೆಲಂಗಾಣದಲ್ಲಿ 7, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ತಲಾ 5 ಮಂದಿ, ಒಡಿಶಾದಲ್ಲಿ ಇಬ್ಬರು, ಬಿಹಾರ ಮತ್ತು ಜಮ್ಮು–ಕಾಶ್ಮೀರ, ಪುದುಚೇರಿ, ಪಂಜಾಬ್ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.
ಇನ್ನು ದೇಶದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಏರಿಕೆಯಾಗುತ್ತಿದ್ದು ಕಳೆದ 24 ಗಂಟೆಗಳಲ್ಲಿ 9,440 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 237196 ಮಂದಿ ಗುಣಮುಖರಾಗಿದ್ದು ಶೇ 55.77ರಷ್ಟು ಮಂದಿ ಗುಣಮುಖರಾದಂತಾಗಿದೆ. ಹಾಗೆಯೇ 174387 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೇಶದಲ್ಲಿ ಅಧಿಕ ಕೊರೊನಾ ಪ್ರಕರಣಗಳು ದೃಢಪಟ್ಟಿರುವ ಮಹಾರಾಷ್ಟ್ರದಲ್ಲಿ 132075 ಜನರಿಗೆ ಸೋಂಕು ತಗುಲಿದ್ದು 6170 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. 65744 ಮಂದಿ ಗುಣಮುಖರಾಗಿದ್ದು 60161 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿ 9150 ಮಂದಿಗೆ ಸೋಂಕು ದೃಢಪಟ್ಟಿದ್ದು 137 ಮಂದಿ ಸಾವನ್ನಪ್ಪಿದ್ದಾರೆ. 3395 ಸಕ್ರಿಯ ಪ್ರಕರಣಗಳಾಗಿದ್ದು 5618 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ತಮಿಳುನಾಡಿನಲ್ಲಿ 59377, ದೆಹಲಿಯಲ್ಲಿ 59746, ಗುಜರಾತ್ನಲ್ಲಿ 27260 , ಉತ್ತರ ಪ್ರದೇಶದಲ್ಲಿ 17731, ರಾಜಸ್ತಾನದಲ್ಲಿ 14930, ಮಧ್ಯಪ್ರದೇಶದಲ್ಲಿ 11903, ಪಶ್ಚಿಮ ಬಂಗಾಳದಲ್ಲಿ 13945 ಕೊರೊನಾ ಪ್ರಕರಣಗಳು ದಾಖಲಾಗಿದೆ.