ಲಕ್ನೋ, ಜೂ 22(DaijiworldNews/PY) : ಎಮ್ಮೆ ಕಬ್ಬಿನ ತೋಟಕ್ಕೆ ನುಗ್ಗಿ ಬೆಳೆ ಹಾಳು ಮಾಡಿದೆ ಎಂದು ಬಾಲಕನನ್ನು ಮೂವರು ಕುಡುಕರು ಹೊಡೆದು ಕೊಂದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತಪಟ್ಟ ಬಾಲಕನನ್ನು ಕುಲ್ದೀಪ್ ಯಾದವ್ (15) ಎಂದು ಗುರುತಿಸಲಾಗಿದೆ. ಘಟನೆಯ ನಂತರ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.
ಶನಿವಾರ ಕುಲ್ದೀಪ್ ಯಾದವ್ ತನ್ನ ಗ್ರಾಮದಲ್ಲಿನ ಗೆಳೆಯರೊಂದಿಗೆ ಆಟವಾಡುತ್ತಿದ್ದನು. ಈ ಸಂದರ್ಭ ಯಾದವ್ ಮನೆಯ ಎಮ್ಮೆಯೊಂದು ಸಾಧು ಸಿಂಗ್ ಹಾಗೂ ಧಮೇಂದ್ರ ಸಿಂಗ್ ಅವರ ಕಬ್ಬಿನ ಗದ್ದೆಗೆ ನುಗ್ಗಿದೆ. ತೋಟಕ್ಕೆ ನುಗ್ಗಿದ ಎಮ್ಮೆಯನ್ನು ಸಾಧು ಹಾಗೂ ಧರ್ಮೇಂದ್ರ ಸಿಂಗ್ ಹಿಡಿದಿದ್ದಾರೆ. ಆದರೆ, ಎಮ್ಮೆಯನ್ನು ಯಾದವ್ನ ಮನೆಗೆ ವಾಪಾಸ್ ನೀಡಲು ಆವರು ನಿರಾಕರಿಸಿದ್ದು, ಯಾದವ್ನೊಂದಿಗೆ ಜಗಳಮಾಡಿದ್ದಾರೆ.
ಮೂವರ ಮಧ್ಯೆ ಜಗಳ ಹೆಚ್ಚಾಗುತ್ತಿದ್ದಂತೆ ಸಾಧು, ಧಮೇಂದ್ರ ಹಾಗೂ ಮಗ ಭೂಪಿಂದರ್ ಯಾದವ್ನ ಮೇಲೆ ಕೋಲಿನಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ಯಾದವ್ ಗಂಭೀರವಾಗಿ ಗಾಯಗೊಂಡಿದ್ದು ಪ್ರಜ್ಞಾಹೀನನಾಗಿ ಸ್ಥಳದಲ್ಲೇ ಕುಸಿದುಬಿದ್ದಿದ್ದಾನೆ. ಈ ಸಂದರ್ಭ ಮೂವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಧಾವಿಸಿದ ಯಾದವ್ ತಂದೆ ಮಗನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿದ್ದಾರೆ. ಆದರೆ, ಬಾಲಕ ಸ್ಥಿತಿ ಗಂಭೀರವಾಗಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗೆ ಯಾದವ್ನನ್ನು ಬರೇಲಿಯ ಆಸ್ಪತ್ರಗೆ ಕೊಂಡೊಯ್ಯಲು ಹೇಳಿದ್ದಾರೆ. ಈ ಸಂದರ್ಭ ಆತನನ್ನು ಆಸ್ಪತ್ರೆಗೆ ಕೊಂಡಿಯ್ಯುತ್ತಿದ್ದ ವೇಳೆ ಆತ ಮಾರ್ಗ ಮಧ್ಯಯೇ ಸಾವನ್ನಪ್ಪಿದ್ದಾನೆ.
ಘಟನೆಯ ಬಗ್ಗೆ ಆರೋಪಿಗಳ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಜಗ್ನಾರಾಯರ್ನ ಪಾಂಡೆ ತಿಳಿಸಿದ್ದಾರೆ.