ಬೆಂಗಳೂರು, ಜೂ.21 (DaijiworldNews/MB) : ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು ಈ ನಡುವೆ ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ 14 ದಿನಗಳ ಕ್ವಾರಂಟೈನ್ನನ್ನು ಕಡ್ಡಾಯ ಎಂದು ಸಚಿವ ಕೆ ಸುಧಾಕರ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕರ್ನಾಟಕದಲ್ಲಿ ಕೊರೊನಾ ಸೋಂಕಿನಿಂದ ಆರೋಗ್ಯಕರವಾಗಿ ಗುಣಮುಖರಾಗುವವರ ದರವು 61.39% ರಷ್ಟಿದ್ದು ಮರಣ ಪ್ರಮಾಣವು 1.49% ರಷ್ಟಿದೆ. ಹಾಗೆಯೇ ಕೊರೊನಾ ಪಾಸಿಟಿವ್ ಬಂದವರ ಸಂಪರ್ಕಕ್ಕೆ ಬಂದವರನ್ನು 24 ಗಂಟೆಗಳಲ್ಲಿ ಹುಡುಕುವ ಕಾರ್ಯವನ್ನು ಮಾಡುತ್ತಿದ್ದು ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ 14 ದಿನಗಳ ಕಡ್ಡಾಯ ಕ್ವಾರಂಟೈನ್ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಭಾನುವಾರ 453 ಮಂದಿಗೆ ಕೊರೊನಾ ಪಾಸಿಟಿವ್ ಆಗಿದ್ದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,150 ಗೆ ಏರಿಕೆಯಾಗಿದೆ. 137 ಮಂದಿ ಸಾವನ್ನಪ್ಪಿದ್ದು 3,395 ಸಕ್ರಿಯ ಪ್ರಕರಣಗಳಾಗಿದ್ದು 5,618 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.