ನವದೆಹಲಿ, ಜೂ 22(DaijiworldNews/PY) : ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ನವರು ನಮ್ಮ ಪಡೆಗಳನ್ನು ಪದೇ ಪದೇ ಅವಮಾನಿಸುವುದನ್ನು ನಿಲ್ಲಿಸಿ, ಅವರ ಸಾಹಸಗಳನ್ನು ಪ್ರಶ್ನೆ ಮಾಡುವುದನ್ನು ನಿಲ್ಲಿಸಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ ನಡ್ಡಾ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ನವರು ನಮ್ಮ ಪಡೆಗಳನ್ನು ಪದೇ ಪದೇ ಅವಮಾನಿಸುವುದನ್ನು ನಿಲ್ಲಿಸಿ, ಅವರ ಸಾಹಸಗಳನ್ನು ಪ್ರಶ್ನೆ ಮಾಡುವುದನ್ನು ನಿಲ್ಲಿಸಿ. ಇದೇ ರೀತಿಯಾಗಿ ಅಂದು ಸರ್ಜಿಕಲ್ ಸ್ಟ್ರೈಕ್ ಆದ ಸಂದರ್ಭ ಕಾಂಗ್ರೆಸ್ನವರು ಮಾಡಿದ್ದರು ಎಂದಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೇಳಿಕೆಗಳನ್ನು ಯಾವ ಭಾರತೀಯರು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಪ್ರಧಾನಿ ಮೋದಿ ಅವರ ಮೇಲೆ ಭಾರತ ದೇಶದ ಜನರಿಗೆ ನಂಬಿಕೆ ಇದೆ. ಪ್ರಧಾನಿ ಮೋದಿ ಅವರ ಆಡಳಿತ ಅನುಭವಗಳನ್ನು ಈ ದೇಶದ 130 ಕೋಟಿ ಜನರು ನೋಡುತ್ತಿದ್ದಾರೆ. ದೇಶದ ಹಿತಾಸಕ್ತಿ ಮುಖ್ಯ ಎನ್ನುವ ಬಗ್ಗೆ ಪ್ರಧಾನಿ ಮೋದಿ ಅವರು ಕಾಳಜಿ ಹೊಂದಿದ್ದಾರೆ ಎನ್ನುವ ಬಗೆಯೂ ಜನರಿಗೆ ತಿಳಿದಿದೆ ಎಂದು ಟ್ವೀಟ್ ಮಾಡಿದ್ದಾರೆ.
ಮನಮೋಹನ್ ಸಿಂಗ್ ಅವರು ಪ್ರಧಾನಿ೦ಯಾಗಿದ್ದ ಸಂದರ್ಭ 43 ಸಾವಿರ ಕಿ.ಮೀ ಗೂ ಹೆಚ್ಚಿನ ಭೂಪ್ರದೇಶವನ್ನು ಚೀನಾಕ್ಕೆ ಬಿಟ್ಟುಕೊಟ್ಟಿದ್ದರು. ಯುಪಿಎ ಆಡಳಿತದ ವೇಳೇ. ಚೀನಾದೊಂದಿಗೆ ಯುದ್ದ ಮಾಡದೇ ಭಾರತ ಶರಣಾಗಿತ್ತು. ಅಲ್ಲದೇ, 2010ರಿಂದ 2013ರ ನಡುವೆ ಭಾರತದ ಮೇಲೇ ಚೀನಾ 600ಕ್ಕೂ ಹೆಚ್ಚು ಬಾರಿ ಆಕ್ರಮಣ ಮಾಡಿತ್ತು. ಆ ಸಮಯದಲ್ಲಿ ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ಏಕೆ ಸುಮ್ಮನಿದ್ದರು. ಧೈರ್ಯವಾಗಿ ಚೀನಾವನ್ನು ಎದುರುಸಬೇಕಿತ್ತು ಎಂದು ಕೇಳಿದ್ದಾರೆ.