ಬೆಂಗಳೂರು, ಜೂ 22(DaijiworldNews/PY) : ಪ್ರಧಾನಿ ಅವರು ಸರ್ವ ಪಕ್ಷ ಸಭೆಯಲ್ಲಿ ಗಡಿಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ ಎಂದಿದ್ದಾರೆ. ಆದರೆ, ಮೋದಿ ಅವರು ಹೇಳಿದ್ದೇ ಒಂದು, ಗಡಿಯಲ್ಲಿ ಆಗಿದ್ದೇ ಇನ್ನೊಂದು. ಪ್ರಧಾನಿ ಮೋದಿ ಅವರು ಸತ್ಯ ಬಹಿರಂಗಪಡಿಸಬೇಕು ಎಂದು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ನಮ್ಮ ಯೋಧರು ಹುತಾತ್ಮರಾಗಲು ಕಾರಣವೇನು ಎನ್ನುವುದನ್ನು ದೇಶದ ಜನತೆಯ ಮುಂದಿಟ್ಟಿಲ್ಲ. ಪ್ರಧಾನಿ ಅವರು ಸರ್ವಪಕ್ಷ ಸಭೆಯಲ್ಲಿ ಗಡಿಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ ಎಂದು ಹೇಳಿದ್ದಾರೆ. ಆದರೆ, ಗಡಿಯಲ್ಲಿ ಏನು ಸಮಸ್ಯೆಯಾಗಿಲ್ಲ ಎಂದರೆ, 20 ಯೋಧರು ಹೇಗೆ ಸತ್ತಿದ್ದು. ಅವರನ್ನು ಕೊಂದವರು ಯಾರು ಎಂದು ಕೇಳಿದ್ದಾರೆ.
ಡಿಕೆಶಿ ಅವರಿಗೆ ಲಾಕ್ಡೌನ್ ಘೋಷಣೆ ಮಾಡಲು ಬರುವುದಿಲ್ಲ ಎಂದು ಹೇಳಿದ್ದ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ ಅವರು, ನಾನು ಕನಕಪುರದ ನಾಗರಿಕ. ಜನರು ನನಗೆ ಅಧಿಕಾರ ಕೊಟ್ಟಿದ್ದು, ಹಾಗಾಗಿ ನಾನು ನನ್ನ ಕಾರ್ಯವನ್ನು ನಿರ್ವಹಿಸುತ್ತಿದ್ದೇನೆ. ಅವರು ದೊಡ್ಡವರು. ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಯಾವುದೇ ಎಪಿಸೋಡ್ ಬೇಕಾದರೂ ಅವರು ಬಿಡಗಡೆ ಮಾಡಲಿ. ಬಿಜೆಪಿ ಸರ್ಕಾರ ಏನಾದರೂ ಮಾಡಲಿ. ಆದರೆ, ಸಲಹೆ ಕೇಳಿದರೆ ಕೊಡುತ್ತೇವೆ ಎಂದು ಹೇಳಿದರು.