ನವದೆಹಲಿ, ಜೂ 23(DaijiworldNews/PY) : ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ಮೊದಲು ಕಾಂಗ್ರೆಸ್ ಒಪ್ಪಂದಕ್ಕೆ ಸಹಿ ಹಾಕಿತು. ನಂತರ ಭಾರತದ ಭೂ ಭಾಗವನ್ನು ಚೀನಾಕ್ಕೆ ಒಪ್ಪಿಸಿತು. ರಾಹುಲ್ ಗಾಂಧಿ ಅವರು ದೋಕಲಾ ವಿಷಯದಲ್ಲಿ ರಹಸ್ಯವಾಗಿ ಚೀನಾ ರಾಯಭಾರ ಕಚೇರಿಗೆ ಭೇಟಿ ನೀಡಿದರು. ರಾಹುಲ್ ನಡೆಯು ಚೀನಾ ಕಮ್ಯುನಿಸ್ಟ್ ಪಕ್ಷ, ಕಾಂಗ್ರೆಸ್ ಪಕ್ಷದ ನಡುವುನ ಒಡಂಬಡಿಕೆಯ ಪರಿಣಾಮವೇ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಕೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ಮೊದಲು ಕಾಂಗ್ರೆಸ್ ಒಪ್ಪಂದಕ್ಕೆ ಸಹಿ ಹಾಕಿತು. ನಂತರ ಭಾರತದ ಭೂ ಭಾಗವನ್ನು ಚೀನಾಕ್ಕೆ ಒಪ್ಪಿಸಿತು. ರಾಹುಲ್ ಗಾಂಧಿ ಅವರು ದೋಕಲಾ ವಿಷಯದಲ್ಲಿ ರಹಸ್ಯವಾಗಿ ಚೀನಾ ರಾಯಭಾರ ಕಚೇರಿಗೆ ಭೇಟಿ ನೀಡಿದರು. ಅವರು ಈಗ ಹೇಳುತ್ತಿರುವ ಹೇಳಿಕೆಯು ಉಭಯ ಪಕ್ಷಗಳ ಮಧ್ಯವಿರುವ ಒಪ್ಪಂದದ ಫಲವಿರಬೇಕು. ಎಂದಿದ್ದಾರೆ.
2008ರಲ್ಲಿ ಉಭಯ ಪಕ್ಷಗಳು ಉನ್ನತ ಮಟ್ಟದ ವಿನಿಮಯ ನಡೆಸುವ ಸಲುವಾಗಿ ಪ್ರಮುಖ ಪ್ರಾದೇಶಿಕ ಹಾಗೂ ಅಂತರಾಷ್ಟ್ರೀಯ ವಿಷಯಗಳ ಬಗ್ಗೆ ಪರಸ್ಪರ ಸಮಾಲೋಚನೆ ನಡೆಸುವ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದವು. ಈ ಒಪ್ಪಂದಕ್ಕೆ ಆ ಸಂದರ್ಭ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಹುಲ್ ಗಾಂಧಿ ಹಾಗೂ ಈಗಿನ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರು ಸಹಿ ಹಾಕಿದ್ದರು.
ಕಳೆದ ವಾರ ಭಾರತ-ಚೀನಾ ನಡುವೆ ಲಡಾಖ್ನಲ್ಲಿ ನಡೆದ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಈ ವಿಚಾರವಾಗಿ ರಾಹುಲ್ ಗಾಂಧಿ ಅವರು ಮೋದಿ ಸರ್ಕಾರವನ್ನು ನಿರಂತರವಾಗಿ ಆರೋಪಿಸುತ್ತಲೇ ಇದ್ದಾರೆ.