ನವದೆಹಲಿ, ಜೂ 23 (Daijiworld News/MSP): ಭಾರತ, ಚೀನಾ ಗಡಿ ಭಾಗವಾದ ಪೂರ್ವ ಲಡಾಖ್ ನ ಗಾಲ್ವಾನ್ ನಲ್ಲಿ ಉದ್ಭವಿಸಿರುವ ಸದ್ಯದ ಪರಿಸ್ಥಿತಿಗೆ ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಸರ್ಕಾರದ ದುರಾಡಳಿತ ಕಾರಣ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.
ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ (ಸಿಡಬ್ಲ್ಯುಸಿ) ಮಾತನಾಡಿದ ಸೋನಿಯಾಗಾಂಧಿ, ನರೇಂದ್ರ ಮೋದಿ ಸರ್ಕಾರವು, ನಮ್ಮ ದೇಶದ ಒಳಗೆ ಚೀನಾದ ಸೈನಿಕರು ಒಳನುಸುಳಿದ್ದನ್ನು "ನಿರಾಕರಿಸುವ" ಮೂಲಕ ಗಡಿಯಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಲಿಲ್ಲ, ಇದಕ್ಕೆ ಸರ್ಕಾರದ ದುರಾಡಳಿತ ಕಾರಣ " ಎಂದು ಅರೋಪಿಸಿದ್ದಾರೆ
ಭಾರತದ ಭೀಕರ ಆರ್ಥಿಕ ಬಿಕ್ಕಟ್ಟು, ಭಾರೀ ಪ್ರಮಾಣದ ಸಾಂಕ್ರಾಮಿಕ ರೋಗ ಮತ್ತು ಚೀನಾದ ಗಡಿಯಲ್ಲಿ ಪೂರ್ಣ ಪ್ರಮಾಣದ ಬಿಕ್ಕಟ್ಟು ಮತ್ತು “ವ್ಯಾಪಕವಾದ ದುಃಖ, ಭಯ ಮತ್ತು ಸುರಕ್ಷತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಅಪಾಯ” ಉಂಟಾಗಿದೆ ಎಂದು ಶ್ರೀಮತಿ ಗಾಂಧಿ ಹೇಳಿದ್ದಾರೆ
"ಸಾಂಕ್ರಾಮಿಕ ರೋಗದ ನಿರ್ವಹಣೆ ಮೋದಿ ಸರ್ಕಾರದ ಅತ್ಯಂತ ವಿನಾಶಕಾರಿ ವೈಫಲ್ಯಗಳಲ್ಲಿ ಒಂದಾಗಿದೆ. ಕೇಂದ್ರ ಸರ್ಕಾರ ಸತತ 17 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿರಂತರವಾಗಿ ಹೆಚ್ಚಿಸುತ್ತಲೇ ಇದೆ, ಜಾಗತಿಕ ಕಚ್ಚಾತೈಲ ಬೆಲೆಯಲ್ಲಿ ಇಳಿಕೆಯಾಗಿದ್ದರೂ ಭಾರತದಲ್ಲಿ ಇಂಧನ ದರ ಏರುಗತಿಯಲ್ಲೇ ಮುಂದುವರೆದಿದೆ ಇದು ಕೂಡ ಮೋದಿ ಸರ್ಕಾರದ ದುರಾಡಳಿತಕ್ಕೆ ನಿದರ್ಶನವಾಗಿದೆ. ಇನ್ನು ಲಾಕ್ಡೌನ್ನಿಂದಾಗಿ ದೇಶ ಇನ್ನೆಂದೂ ಕಂಡರಿಯದಂತಹ ತೀವ್ರ ಆರ್ಥಿಕ ಕುಸಿತಕ್ಕೆ ಕಾರಣವಾಗಿದೆ ಎಂದು ಟೀಕಿಸಿದ್ದಾರೆ.