ನವದೆಹಲಿ, ಜೂ 24 (Daijiworld News/MSP): ಚೀನಾ ಮತ್ತು ಭಾರತ ಗಡಿಯಾದ ಗಾಲ್ವಾನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ವಾಗ್ಧಾಳಿ ನಡೆಸುತ್ತಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ವಕ್ತಾರ ಸಂಬೀತ್ ಪಾತ್ರ ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದು, ಲಡಾಖ್ ಗಡಿಯಲ್ಲಿ ಭಾರತ ಒಂದು ಇಂಚಿನಷ್ಟು ಭೂಮಿಯನ್ನು ಕೂಡ ಬಿಟ್ಟುಕೊಟ್ಟಿಲ್ಲ. ಆದರೆ, ಕಾಂಗ್ರೆಸ್ ಪಕ್ಷ ಮಾತ್ರ ತಮ್ಮ ಮರ್ಯಾದೆಯನ್ನು ಬಿಟ್ಟುಕೊಟ್ಟಿದೆ ಎಂದಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಪಾತ್ರ "ಸೋನಿಯಾಜಿ, ನಾವು ನಿಮಗೆ ಸ್ಪಷ್ಟವಾಗಿ ಹೇಳುತ್ತೇವೆ. ಭಾರತ ಒಂದು ಇಂಚಿನ ಭೂಮಿಯನ್ನು ಕೂಡ ಬಿಟ್ಟುಕೊಟ್ಟಿಲ್ಲ. ಆದರೆ, ಕಾಂಗ್ರೆಸ್ ನಾಚಿಕೆ ಬಿಟ್ಟಿರುವುದು ಮಾತ್ರ ಬೇಸರದ ಸಂಗತಿ" ಎಂದಿದ್ದಾರೆ.
ದೇಶದ ಭದ್ರತೆಯ ವಿ಼ಚಾರದಲ್ಲಿ ಯಾವತ್ತಿಗೂ ರಾಜಿ ಎಂಬುವುದಿಲ್ಲ. ಈ ವಿಚಾರವಾಗಿ ಎಂದಿದ್ದದೂ ನಾವೆಲ್ಲರೂ ನಮ್ಮ ಸೇನೆಯ ಬದ್ಧತೆ ಮತ್ತು ಸದೃಢತೆಯೊಂದಿಗೆ ನಿಲ್ಲಬೇಕು. ಚೀನಾ ನಮ್ಮ ದೇಶವನ್ನು ಆಕ್ರಮಿಸಿಲ್ಲ ಎಂದು ಸ್ಪಷ್ಟನೆ ನೀಡಿದರು