ಬೆಂಗಳೂರು, ಜೂ 24 (Daijiworld News/MSP): ಕೊರೊನಾ ವೈರಸ್ ದೃಢಪಟ್ಟು ಚಿಕಿತ್ಸೆ ಪಡೆಯುತ್ತಿರುವ ರೋಗಿಗೆ ಯಾವುದೇ ರೋಗ ಲಕ್ಷಣವಿಲ್ಲದಿದ್ದರೆ ಆತನನ್ನು 10 ದಿನದ ಬಳಿಕ ಸೋಂಕು ಪರೀಕ್ಷೆ ಒಳಪಡಿಸದೆ ಕೊವೀಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದು ಎಂದು ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದೆ.
ಹೊಸ ಮಾರ್ಗಸೂಚಿಯ ಪ್ರಕಾರ, ’ರೋಗಿಗೆ ಬಿಡುಗಡೆಯೂ ಮುಂಚಿನ ಮೂರು ದಿನ ಯಾವುದೇ ಕೊವೀಡ್ ಸೋಂಕು ಲಕ್ಷಣವಿರಬಾರದು ಎಂದು ಸ್ಪಷ್ಟವಾಗಿ ಉಲ್ಲೇಖಿಸಿಲಾಗಿದೆ. ಈ ಹಿಂದೆ ಬಿಡುಗಡೆಗೂ ಮುನ್ನ ಕಡ್ಡಾಯವಾಗಿ ಎರಡು ಬಾರಿ ಸೋಂಕು ಪರೀಕ್ಷೆ ಮಾಡಿಸಿ ನೆಗೆಟಿವ್ ವರದಿ ಬಂದಿರಬೇಕಿತ್ತು. ಆದರೆ ಹೊಸ ಗೈಡ್ ಲೈನ್ಸ್ ಪ್ರಕಾರ ಎಸಿಮ್ಟಾಟಿಕ್ ಸೋಂಕಿತರಿಗೆ ಪಾಸಿಟಿವ್ ವರದಿ ಬಂದ 10 ದಿನಗಳ ಬಳಿಕ ಯಾವುದೇ ಲಕ್ಷಣಗಳಿಲ್ಲದಿದ್ದರೆ ಪರೀಕ್ಷೆ ನಡೆಸದೆ ಬಿಡುಗಡೆ ಮಾಡಬಹುದು ಎಂದಿದೆ.
ಆದರೆ ಈ ನಿಯಮ ಎಚ್ಐವಿ, ಕಸಿ ಚಿಕಿತ್ಸೆಗೆ ಒಳಗಾದ ಸೋಂಕಿತರು ಅನ್ವಯಿಸುದಿಲ್ಲ. ಇವರ ಪರೀಕ್ಷಾ ವರದಿ ನೆಗೆಟಿವ್ ಬಂದ ಬಳಿಕವಷ್ಟೇ ಬಿಡುಗಡೆ ಮಾಡಬೇಕೆಂದು ಸೂಚಿಸಲಾಗಿದೆ.
ಒಂದು ವೇಳೆ ರೋಗಿಯಲ್ಲಿ 14 ದಿನಗಳವರೆಗೂ ಸೋಂಕು ಲಕ್ಷಣಗಳು ಕಂಡುಬಂದರೆ, ಅವರನ್ನು ಮಾತ್ರ ಸಂಪೂರ್ಣವಾಗಿ ಗುಣಮುಖರಾದ ಬಳಿಕವೇ ಕೊರೋನಾ ವೈರಸ್ ಕೇರ್ ಸೆಂಟರ್ ನಿಂದ ಬಿಡುಗಡೆ ಮಾಡಬಹುದು ಎಂದು ತಿಳಿಸಿದೆ.