ನವದೆಹಲಿ, ಜೂ. 24 (DaijiworldNews/MB) : ಕೊರೊನಾ ಹಾಗೂ ಪೆಟ್ರೋಲ್-ಡೀಸೆಲ್ ಬೆಲೆಯನ್ನು ಮೋದಿ ಸರ್ಕಾರ ಅನ್ಲಾಕ್ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ.
ಸತತ ೧೮ ದಿನಗಳಿಂದ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗುತ್ತಿರುವ ಕಾರಣ ಹಾಗೂ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಟ್ವೀಟ್ ಮಾಡಿರುವ ಅವರು, ಕೊರೊನಾ ಸಾಂಕ್ರಾಮಿಕ ಹಾಗೂ ಪೆಟ್ರೋಲ್-ಡೀಸೆಲ್ ಬೆಲೆಯನ್ನು ಮೋದಿ ಸರ್ಕಾರ ಅನ್ಲಾಕ್ ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಟ್ವೀಟ್ನಲ್ಲಿ ಅವರು ಗ್ರಾಫ್ ಒಂದನ್ನು ಕೂಡಾ ಹಾಕಿದ್ದಾರೆ. ಅದರಲ್ಲಿ ಕೊರೊನಾ ವೈರಸ್ ಮಾತ್ರವಲ್ಲ ಏರುತ್ತಿರುವುದು ಎಂದು ಬರೆಯಲಾಗಿದ್ದು ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಹಾಗೂ ಕೊರೊನಾ ಪ್ರಕರಣ ಏರಿಕೆಯನ್ನು ಗ್ರಾಫ್ ಮೂಲಕ ನಮೂದಿಸಲಾಗಿದೆ.