ಬೆಂಗಳೂರು, ಜೂ 24(DaijiworldNews/PY) : ಪಿಯುಸಿ ಉಪನ್ಯಾಸಕರ ನೇಮಕಾತಿಗೆ ಸಂಬಂಧಪಟ್ಟಂತೆ ಜುಲೈ8ರಂದು ಕೌನ್ಸೆಲಿಂಗ್ ಮಾಡಲು ಸಚಿವ ಸುರೇಶ್ಕುಮಾರ್ ಸೂಚಿಸಿದ್ದಾರೆ.
ಈ ಬಗ್ಗೆ ಪತ್ರದ ಮೂಲಕ ಅವರು ಪದವಿಪೂರ್ವ ಶಿಕ್ಷಣ ಮಂಡಳಿಯ ನಿರ್ದೇಶಕರಿಗೆ ತಿಳಿಸಿದ್ದು, ಕೊರೊನಾ ವೈರಸ್ ಇರುವ ಕಾರಣ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿದ್ದು, ಆನ್ ಲೈನ್ ಮೂಲಕ ಕೌನ್ಸೆಲಿಂಗ್ ನಡೆಸುವಂತೆ ತಿಳಿಸಿದ್ದಾರೆ.