ಬೆಂಗಳೂರು, ಜೂ 24(DaijiworldNews/PY) : ಇಂಗ್ಲಿಷ್ ಪ್ರಶ್ನೆ ಪತ್ರಿಕೆಗಳನ್ನು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ಸುರೇಶ್ ಕುಮಾರ್ ಈ ಪ್ರಶ್ನೆ ಪತ್ರಿಕೆ ನಕಲಿ ಎಂದಿದ್ದಾರೆ.
ಇಂಗ್ಲಿಷ್ ಪ್ರಶ್ನೆ ಪತ್ರಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಕಿಡಿಗೇಡಿಗಳ ವಿರುದ್ದ ಸೈಬರ್ ಪೋಲೀಸ್ ಠಾಣೆಗೆ ದೂರು ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಮನವಿ ಮಾಡಿರುವ ಸಚಿವರು, ಇಂತಹ ವದಂತಿಗಳಿಗೆ ಕಿವಿ ಕೂಡಬೇಡಿ. ವಿದ್ಯಾರ್ಥಿಗಳು ಧೈರ್ಯಗುಂದದೇ ಪರೀಕ್ಷೆ ಬರೆಯಬೇಕು ಎಂದಿದ್ದಾರೆ. ಅಲ್ಲದೆ, ಇಂತಹ ಸುದ್ದಿಗಳನ್ನು ಮಾಧ್ಯಮಗಳು ಹರಡಬಾರದು ಎಂದು ಹೇಳಿದ್ದಾರೆ.