ಬುದ್ಗಾಮ್, ಜೂ. 25 (DaijiworldNews/MB) : ಭಾರತೀಯ ಭದ್ರತಾ ಪಡೆಯು ಲಷ್ಕರ್-ಇ-ತೊಯ್ಬಾ ಭಯೋತ್ಪಾದಕ ಸಂಘಟನೆಗೆ ಸೇರಿರುವ ಅಡಗು ತಾಣವನ್ನು ಧ್ವಂಸ ಮಾಡಿದ್ದು ಈ ಸಂಘಟನೆಯ ಐವರು ಉಗ್ರರನ್ನು ಗುರುವಾರ ಜಮ್ಮು ಕಾಶ್ಮೀರದ ಬುದ್ಗಾಮ್ನ ನರ್ಬಾಲ್ ಪ್ರದೇಶದಲ್ಲಿ ಬಂಧಿಸಿದೆ.
ಬಂಧಿತ ಉಗ್ರರನ್ನು ಒವೈಸ್ ಅಹ್ಮದ್, ಇಮ್ರಾನ್ ರಶೀದ್, ಅಬಿದ್ ರತೆರ್, ಮೊಹ್ಸಿನ್ ಖದೀರ್ ಮತ್ತು ಇಫ್ಶಾನ್ ಅಹ್ಮದ್ ಘನಿ ಎಂದು ಗುರುತಿಸಲಾಗಿದೆ.
ಲಷ್ಕರ್-ಇ-ತೊಯ್ಬಾ ಭಯೋತ್ಪಾದಕ ಸಂಘಟನೆಯ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನಲೆ ಬುದ್ಗಾಮ್ ಪೊಲೀಸರು ಮತ್ತು ರಾಷ್ಟ್ರೀಯ ರೈಫಲ್ಸ್ ನ ಆರ್ಮಿ 2 ನ ಪೊಲೀಸರು ಶೋಧ ನಡೆಸಿದ್ದು ಐವರು ಉಗ್ರರನ್ನು ಬಂಧಿಸಿದ್ದಾರೆ.