ಬೆಂಗಳೂರು , ಜೂ 25(DaijiworldNews/PY) : ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಪುನಃ ಲಾಕ್ಡೌನ್ ಆಗುತ್ತಾ ಎನ್ನುವ ಪ್ರಶ್ನೆ ಎದ್ದಿದ್ದು, ಎಸ್ಎಸ್ಎಲ್ಸಿ ಪರೀಕ್ಷೆ ಮುಗಿದ ನಂತರವೇ ಲಾಕ್ಡೌನ್ ಬಗ್ಗೆ ತೀಮಾ೯ನ ತೆಗೆದುಕೊಳ್ಳಲಾಗುತ್ತದೆ.
ಸಿಎಂ ಈ ಬಗ್ಗೆ ಸಚಿವರಿಗೆ ಸಂದೇಶ ರವಾನೆ ಮಾಡಿದ್ದು, ಎಲ್ಲಿಯೂ ಎಸ್ಎಸ್ಎಲ್ಸಿ ಪರೀಕ್ಷೆ ಮುಗಿಯುವ ತನಕ ಲಾಕ್ಡೌನ್ ಇಲ್ಲ. ಕ್ಯಾಬಿನೆಟ್ನಲ್ಲಿ ಕೇವಲ ಚಚೆ೯ ಮಾತ್ರ. ತೀಮಾ೯ನ ಇಲ್ಲ ಎಂದು ಸಂದೇಶದಲ್ಲಿ ತಿಳಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.
ಈ ವಿಚಾರವಾಗಿ ಸಿಎಂ ಕ್ಯಾಬಿನೆಟ್ಗೂ ಮುನ್ನ ಮಾಧ್ಯಮಗಳಿಗೆ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ. ಜುಲೈ 4ಕ್ಕೆ ಎಸ್ಎಸ್ಎಲ್ಸಿ ಅಂತ್ಯವಾಗಲಿದ್ದು, ಹಾಗಾಗಿ ಅಲ್ಲಿ ತನಕ ಯಾವುದೇ ನಿರ್ಣಯ ಇಲ್ಲ. ಜುಲೈ 5ರ ತನಕ ತೀಮಾ೯ನ ಮಾಡದಿರಲು ಸಿಎಂ ನಿರ್ಧಾರಿಸಿದ್ದಾರೆ.