ನವದೆಹಲಿ, ಜೂ. 25 (DaijiworldNews/MB) : ದೇಶದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಒಂದು ದಿನದಲ್ಲೇ 16,922 ಪ್ರಕರಣಗಳು ದಾಖಲಾಗಿದ್ದು, 418 ಜನರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಒಟ್ಟು 4,73,105 ಕೊರೊನಾ ಪ್ರಕರಣಗಳು ದಾಖಲಾಗಿದ್ದು ಒಟ್ಟು 14,894 ಸಾವನ್ನಪ್ಪಿದ್ದಾರೆ.
ಇನ್ನು ದೇಶದಲ್ಲಿ ಕೊರೊನಾ ಸೋಂಕಿತರೊಂದಿಗೆ ಕೊರೊನಾದಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯು ಹೆಚ್ಚುತ್ತಿದ್ದು 2,71,697 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹಾಗೆಯೇ 1,86,514 ಸಕ್ರಿಯ ಪ್ರಕರಣಗಳಾಗಿವೆ.
ದೇಶದಲ್ಲಿ ಅಧಿಕ ಕೊರೊನಾ ಪ್ರಕರಣಗಳು ದೃಢಪಟ್ಟಿರುವ ಮಹಾರಾಷ್ಟ್ರದಲ್ಲಿ 1,42,900 ಜನರಿಗೆ ಸೋಂಕು ತಗುಲಿದ್ದು 6739 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. 73792 ಮಂದಿ ಗುಣಮುಖರಾಗಿದ್ದು 62369 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿ 10118 ಮಂದಿಗೆ ಸೋಂಕು ದೃಢಪಟ್ಟಿದ್ದು 164 ಮಂದಿ ಸಾವನ್ನಪ್ಪಿದ್ದಾರೆ. 3803 ಸಕ್ರಿಯ ಪ್ರಕರಣಗಳಾಗಿದ್ದು 6151 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ತಮಿಳುನಾಡಿನಲ್ಲಿ 67468, ದೆಹಲಿಯಲ್ಲಿ 70390, ಗುಜರಾತ್ನಲ್ಲಿ 28943 , ಉತ್ತರ ಪ್ರದೇಶದಲ್ಲಿ 19557, ರಾಜಸ್ತಾನದಲ್ಲಿ 16009, ಮಧ್ಯಪ್ರದೇಶದಲ್ಲಿ 12448, ಪಶ್ಚಿಮ ಬಂಗಾಳದಲ್ಲಿ 15173, ತೆಲಂಗಾಣದಲ್ಲಿ 10444 ಕೊರೊನಾ ಪ್ರಕರಣಗಳು ದಾಖಲಾಗಿದೆ.