ಚಂಡೀಗಢ, ಜೂ 25(DaijiworldNews/PY) : ರಾತ್ರಿ ವೇಳೆ ಮನೆಯ ಹೊರಗೆ ಹೋದ ವ್ಯಕ್ತಿ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ಪಂಜಾಬ್ನ ಪಾಟಿಯಾಲ ಜಿಲ್ಲೆಯಲ್ಲಿ ನಡೆದಿದೆ.
ಮೃತಪಟ್ಟ ಯುವಕನನ್ನು ಬಿಹಾರ ಮೂಲದ ಮಿಥುನ್ ಪಾಟೀಲ್ ಎಂದು ಗುರುತಿಸಲಾಗಿದ್ದು, ಆರೋಪಿಗಳನ್ನು ಪಟಿಯಾಲ ಜಿಲ್ಲೆಯ ಶಂಕರ್ಪುರ ಗ್ರಾಮದ ಜಗಮೋಹನ್ ಸಿಂಗ್ ಮತ್ತು ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಭೂಪಿಂದರ್ ಸಿಂಗ್ ಎನ್ನಲಾಗಿದೆ.
ಘಟನೆಯ ಬಗ್ಗೆ ಮಾತನಾಡಿದ ಮೃತ ಮಿಥುನ್ ತಂದೆ, ಊಟದ ನಂತರ ಸುಮಾರು 12 ಗಂಟೆಗೆ ನಾನು, ನನ್ನ ಮಗ ಮತ್ತು ಆತನ ಪತ್ನಿ ಗುರುದ್ವಾರದ ರಸ್ತೆಯಲ್ಲಿ ವಾಕ್ ಮಾಡುತ್ತಿದ್ದೆವು. ಈ ಸಂದಭ೯ ಅಲ್ಲಿಗೆ ಬಂದ ಇಬ್ಬರು ವ್ಯಕ್ತಿಗಳು, ಆ ಸಮಯದಲ್ಲಿ ಇಲ್ಲಿ ಏನು ಮಾಡುತ್ತಿದ್ದೀರಿ ಎಂದು ಕೇಳಿದ್ದು, ಆ ಸಂದರ್ಭ ಓವ೯ ಮಿಥುನ್ಗೆ ಬಾಟಲಿಯಲ್ಲಿ ಹೊಡೆದ. ಬಳಿಕ ಇಬ್ಬರೂ ಕೂಡಿ ಕಲ್ಲು ಇಟ್ಟಿಗೆಯಿಂದ ಹಲ್ಲೆ ಮಾಡಿದರು ಎಂದು ಹೇಳಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ,ಮಿಥುನ್ ತನ್ನ ತಂದೆ ಹಾಗೂ ಪತ್ನಿಯೊಂದಿಗೆ ಪಾಟಿಯಾಲದ ಕಾರ್ಖಾನೆ ಪ್ರದೇಶದಲ್ಲಿ ವಾಸವಿದ್ದರು ಎನ್ನಲಾಗಿದೆ. ಮಿಥುನ್ ಅವರನ್ನು ಬಿಯರ್ ಬಾಟಲ್, ಇಟ್ಟಿಗೆ ಮತ್ತು ಕಲ್ಲುಗಳಿಂದ ಹಲ್ಲೆ ಮಾಡಲಾಗಿದೆ. ಈ ಸಂದಭ೯ ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಘಟನೆಯ ಬಗ್ಗೆ ಗ್ರೇನ್ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವಿಚಾರವಾಗಿ ಮಾತನಾಡಿದ
ಇನ್ಸ್ ಸ್ಪೆಕ್ಟರ್ ಗುರ್ನಮ್ ಸಿಂಗ್, ಆರೋಪಿಗಳನ್ನು ಪತ್ತೆ ಮಾಡಲಾಗಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸುತ್ತೇವೆ ಎಂದಿದ್ದಾರೆ.