ನವದೆಹಲಿ, ಜೂ. 25 (DaijiworldNews/MB) : ಗಾಲ್ವನ್ ಕಣಿವೆಯಲ್ಲಿ ಉದ್ವಿಗ್ನ ವಾತಾವರಣ ಮುಂದುವರೆದಿದ್ದು ಚೀನಾ ಸೇನೆ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ಎಸಿ) ಉತ್ತರಕ್ಕಿರುವ ದೆಪ್ಸಾಂಗ್ ಬಯಲು ಪ್ರದೇಶದುದ್ದಕ್ಕೂ ಬೀಡು ಬಿಟ್ಟಿದ್ದು ಆರ್ಟಿಲರಿ (ಫಿರಂಗಿ ಪಡೆ) ಯನ್ನು ನಿಯೋಜಿಸಿದೆ. ಹಾಗೆಯೇ ಟ್ಯಾಂಕ್ಗಳನ್ನೂ ಚೀನಾ ನಿಯೋಜಿಸಿದೆ ಎಂದು ವರದಿ ತಿಳಿಸಿದೆ.
ಭಾರತವೂ ತನ್ನ ಸೇನಾ ನಿಯೋಜನೆಯನ್ನು ಹಂತಹಂತವಾಗಿ ಏರಿಸುತ್ತಿದೆ.
ಚೀನಾವು ಭಾರತದ ಸೇನಾ ನೆಲೆಗಳನ್ನು ಗುರಿಯಾಗಿಸಿ ಆರ್ಟಿಲರಿ (ಫಿರಂಗಿ ಪಡೆ) ಯನ್ನು ನಿಯೋಜಿಸಿದ್ದು ಈ ಆರ್ಟಿಲರಿಗೆ ಸುಮಾರು 40 ಕಿ.ಮೀ. ವ್ಯಾಪ್ತಿಗೆ ಶೆಲ್ ಹಾರಿಸಬಲ್ಲ ಸಾಮರ್ಥ್ಯವಿದೆ. ಚೀನಾವು ಭಾರತದ ಮುಖ್ಯ ರಸ್ತೆಗಳನ್ನು ಗುರಿಯಾಗಿಸಿ ಟ್ಯಾಂಕ್ಗಳನ್ನೂ ನಿಯೋಜಿಸಿದೆ ಎಂದು ಎನ್ಡಿಟಿವಿ ಜಾಲತಾಣದಲ್ಲಿ ವರದಿ ಮಾಡಿದೆ.