ನವದೆಹಲಿ, ಜೂ. 25 (DaijiworldNews/MB) : ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹೋರಾಡಿದವರ ತ್ಯಾಗ, ಬಲಿದಾನವನ್ನು ದೇಶ ಮರೆಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 45 ವರ್ಷಗಳ ಹಿಂದೆ ಇಂದು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಆ ಸಂದರ್ಭದಲ್ಲಿ ಭಾರತದ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೋರಾಡಿದವರು, ಚಿತ್ರಹಿಂಸೆ ಅನುಭವಿಸಿದರು ಎಲ್ಲರಿಗೂ ನನ್ನ ಶತ ನಮನಗಳು. ಅವರ ತ್ಯಾಗ ಹಾಗೂ ಬಲಿದಾನ ದೇಶ ಎಂದಿಗೂ ಮರೆಯುವುದಿಲ್ಲ.
1975ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು.