ಮುಂಬೈ, ಜೂ 25 (DaijiworldNews/SM): ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ ಮಂಗಳೂರು ಮೂಲದ ಹೋಟೆಲ್ ಉದ್ಯಮಿಯೊಬ್ಬರು ಮುಂಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಪ್ರೇಮನಾಥ ಕೃಷ್ಣ ಶೆಟ್ಟಿ(43) ಆತ್ಮಹತ್ಯೆ ಮಾಡಿಕೊಂಡಿರುವ ಉದ್ಯಮಿಯಾಗಿದ್ದಾರೆ. ಇವರು ರಾಜ್ ಹೋಟೆಲ್ ನ ಪಾಲುದಾರರಾಗಿದ್ದರು. ಕೊರೊನಾ ಲಾಕ್ ಡೌನ್ ನಿಂದಾಗಿ ಕಳೆದ 4 ತಿಂಗಳಿನಿಂದ ಹೋಟೆಲ್ ಬಂದ್ ಆಗಿತ್ತು. ಇದರಿಂದಾಗಿ ಪ್ರೇಮನಾಥ್ ಅವರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಇದರಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಇನ್ನು ಕಳೆದ 7 ವರ್ಷಗಳಿಂದ ರಾಜ್ ಹೋಟೆಲ್ ನ ಪಾಲುದಾರರಾಗಿದ್ದರು ಎಂದು ತಿಳಿದುಬಂದಿದೆ.
ಡೆತ್ ನೋಟ್ ಬರೆದಿಟ್ಟಿದ್ದರು:
ಕಳೆದ 7 ವರ್ಷಗಳಿಂದ ಹೋಟೆಲ್ ಪಾಲುದಾರರಾಗಿ ಪ್ರೇಮನಾಥ್ ಲಾಕ್ ಡೌನ್ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಇದೇ ಕಾರಣದಿಂದಾಗಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕೊರೊನಾ ಲಾಕ್ ಡೌನ್ ಉಂಟಾದ ಸಂದರ್ಭದಲ್ಲಿ ಹೋಟೆಲ್ ಉದ್ಯಮ ಬಂದ್ ಆಗಿದ್ದು ಸಾಕಷ್ಟು ತೊಂದರೆಗಳಾಗಿದೆ ಎಂದು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಇನ್ನು `ತನ್ನ ಆತ್ಮಹತ್ಯೆಗೆ ಯಾರೂ ಕೂಡ ಹೊಣೆಯಲ್ಲ. ನನ್ನ ಸ್ವಂತ ನಿರ್ಧಾರದಿಂದ ಆತ್ಮಹತ್ಯೆ ಮಾಡಿಕೊಂಡಿದ್ದೇನೆ' ಎಂದು ಬರೆದಿಟ್ಟಿದ್ದಾರೆ ಎಂದು ತಿಳಿದುಬಂದಿದೆ.