ನವದೆಹಲಿ, ಜೂ. 26 (DaijiworldNews/MB) : ಆ.12 ರವರೆಗೆ ಎಲ್ಲಾ ಪ್ರಯಾಣಿಕ ರೈಲುಗಳನ್ನು ಭಾರತೀಯ ರೈಲ್ವೆ ಮಂಡಳಿ ರದ್ದುಗೊಳಿಸಲಾಗಿದ್ದು 01.07.2020 ರಿಂದ 12.08.2020 ರ ವರೆಗೆ ಪ್ರಯಾಣಿಕರು ಕಾಯ್ದಿರಿಸಿರುವ ಟಿಕೆಟ್ ಹಣವನ್ನು ಮರುಪಾವತಿ ಮಾಡಲಾಗುವುದು ರೈಲ್ವೆ ಮಂಡಳಿ ತಿಳಿಸಿದೆ.
ಮೇಲ್/ ಎಕ್ಸ್ ಪ್ರೆಸ್, ಪ್ಯಾಸೆಂಜರ್, ಸಬ್ ಅರ್ಬನ್ ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಘೋಷಿಸಿರುವ ರೈಲ್ವೆ ಮಂಡಳಿಯು ವಿಶೇಷ ರೈಲುಗಳ ಸಂಚರಿಸಲಿದೆ ಎಂದು ಮಾಹಿತಿ ನೀಡಿದೆ.
ಹಾಗೆಯೇ ಏ.14 ರಂದು ಹಾಗೂ ಅದಕ್ಕಿಂತ ಮುಂಚಿತವಾಗಿ ರೈಲ್ವೆ ಟಿಕೆಟ್ ಗಳನ್ನು ಕಾಯ್ದಿರಿಸಿದವರಿಗೆ ಸಂಪೂರ್ಣ ಹಣ ಮರುಪಾವತಿ ಮಾಡುವುದಾಗಿ ರೈಲ್ವೆ ಇಲಾಖೆ ತಿಳಿಸಿದ್ದು ಈ ಸಂದರ್ಭದಲ್ಲೇ ಏ.14 ರವರೆಗೆ ಕಾಯ್ದಿರಿಸಲಾಗಿದ್ದ ಟಿಕೆಟ್ನ ಹಣವನ್ನು ಕೂಡಾ ಸಂಪೂರ್ಣ ಮರುಪಾವತಿ ಮಾಡಲಾಗುವುದು ಎಂದು ತಿಳಿಸಿದೆ.
ಮಾರ್ಚ್ 25 ರಂದು ಜಾರಿಯಾದ ಲಾಕ್ಡೌನ್ ಸಂದರ್ಭದಲ್ಲಿ ರೈಲುಗಳು ಸಂಚಾರ ಸ್ಥಗಿತವಾಗಿದ್ದು ಮೇ.16 ರಂದು ಪುನರ್ ಆರಂಭವಾಗಿತ್ತು.