ಪುಲ್ವಾಮ, ಜೂ. 25 (DaijiworldNews/MB) : ಭಾರತೀಯ ಸೇನಾಪಡೆಯು ಓರ್ವ ಉಗ್ರನನ್ನು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರಾಗದ ತ್ರಾಲ್ನ ಛೆನಾ ಉಲಾರ್ ಎಂಬ ಪ್ರದೇಶದಲ್ಲಿ ಹೊಡೆದುರುಳಿಸಿದೆ.
ಈ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನಲೆ ಸೇನಾಪಡೆಯು ಕಾರ್ಯಾಚರಣೆ ಮಾಡಿದ್ದು ಈ ಸಂದರ್ಭದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಎನ್ಕೌಂಟರ್ ನಡೆದು ಒರ್ವ ಉಗ್ರ ಹತ್ಯೆಯಾಗಿದ್ದಾನೆ.
ಇನ್ನು ಹಲವು ದಿನಗಳಿಂದ ಭಾರತೀಯ ಸೇನೆಯು ಉಗ್ರರ ಭೇಟೆ ನಡೆಸುತ್ತಿದ್ದು ಪ್ರಸ್ತುತ ಕಾರ್ಯಾಚರಣೆ ಮುಂದುವರೆದಿದೆ.