ನವದೆಹಲಿ, ಜೂ. 26 (DaijiworldNews/MB) : ವರ್ಣಭೇದದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರವಾದ ಟೀಕೆ ಉಂಟಾದ ಕಾರಣದಿಂದ ಹಿಂದೂಸ್ಥಾನ್ ಯುನಿಲಿವರ್ ಸಂಸ್ಥೆ ಫೇರ್&ಲೌವ್ಲಿ ಕ್ರೀಮ್ನ ಹೆಸರನ್ನು ಬದಲಾವಣೆ ಮಾಡಲು ತೀರ್ಮಾನಿಸಿದ್ದು ಎಲ್ಲಾ ವರ್ಣದ ತ್ವಚೆಗೆ ಬಳಸಬಹುದಾದ ಸೌಂದರ್ಯ ವರ್ಧಕವನ್ನಾಗಿ ಹೆಸರು ಬದಲಾಯಿಸಲು ಮುಂದಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಹಿಂದೂಸ್ಥಾನ್ ಯುನಿಲಿವರ್ ನ ಅಧ್ಯಕ್ಷ ಸಂಜೀವ್ ಮೆಹ್ತಾ, ಪ್ರಸ್ತುತವಾಗಿ ಫೇರ್&ಲೌವ್ಲಿ ಎಂಬ ಹೆಸರು ಸೂಕ್ತವಾಗಿಲ್ಲ. ಎಲ್ಲಾ ವರ್ಣದ ತ್ವಚ್ಛೆಗಳಿಗೂ ಇರುವಂತಹದ್ದು ಸೌಂದರ್ಯವರ್ಧಕ ಈ ಕಾರಣದಿಂದಾಗಿ ಸಂಸ್ಥೆಯು ಎಲ್ಲಾ ವರ್ಣದ ತ್ವಚೆಗೆ ಸೂಕ್ತವಾಗುವ ಸೌಂದರ್ಯವರ್ಧಕಗಳನ್ನು ಪರಿಚಯಿಸಲು ತೀರ್ಮಾನಿಸಿದೆ. ಹೀಗಾಗಿ ಹೆಸರನ್ನು ಬದಲಾವಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಸಂಸ್ಥೆಯು 2019 ರಲ್ಲಿ ವರ್ಣ ಭೇದವಿರುವ ಕಪ್ಪು-ಬಿಳುಪಿನ ಮುಖಗಳ ತನ್ನ ಜಾಹೀರಾತಿನ್ನು ಬದಲಾವಣೆ ಮಾಡಿತ್ತು.
ಅಮೆರಿಕದಲ್ಲಿ ಕಪ್ಪುವರ್ಣೀಯರ ಮೇಲೆ ದಾಳಿ ಖಂಡಿಸಿ ಪ್ರತಿಭಟನೆಗಳು ತೀವ್ರವಾಗಿದ್ದು ಭಾರತದಲ್ಲಿಯೂ ಸಾಮಾಜಿಕ ಜಾಲತಾಣದಲ್ಲಿ ಅಮೆರಿಕದಲ್ಲಿ ನಡೆಯುವ ವರ್ಣಭೇದವನ್ನು ಖಂಡಿಸಲಾಗಿದೆ. ಹಾಗೆಯೇ ಭಾರತದಲ್ಲಿ ನಡೆಯುವ ವರ್ಣಭೇದದ ವಿರುದ್ಧದ ಧ್ವನಿ ಎದ್ದಿದೆ. ಈ ಸಂದರ್ಭದಲ್ಲಿ ತ್ವಚೆಯವರ್ಣವನ್ನು ಮುಂದಿರಿಸಿಕೊಂಡಿರುವ ಫೇರ್&ಲೌವ್ಲಿ ಕ್ರೀಮ್ನ ವಿರುದ್ಧವು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು ಈ ಕಾರಣದಿಂದ ಸಂಸ್ಥೆಯು ಹೆಸರು ಬದಲಾವಣೆಗೆ ಮುಂದಾಗಿದೆ.