ನವದೆಹಲಿ, ಜೂ. 26 (DaijiworldNews/MB) : ದೇಶದಲ್ಲಿ 24 ಗಂಟೆಗಳಲ್ಲಿ 17,296 ಕೊರೊನಾ ಪ್ರಕರಣಗಳು ಪಾಸಿಟಿವ್ ಆಗಿದ್ದು 407 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 4,90,401 ಗೆ ಏರಿಕೆಯಾಗಿದ್ದು ಒಟ್ಟು 15301 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ದೇಶದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ನಡುವೆಯೇ ಸೋಂಕಿನಿಂದ ಹಲವು ಮಂದಿ ಗುಣಮುಖರಾಗುತ್ತಿದ್ದು 285636 ಮಂದಿ ಗುಣಮಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹಾಗೆಯೇ ಪ್ರಸ್ತುತ 189463 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೇಶದಲ್ಲಿ ಅಧಿಕ ಕೊರೊನಾ ಪ್ರಕರಣಗಳು ದೃಢಪಟ್ಟಿರುವ ಮಹಾರಾಷ್ಟ್ರದಲ್ಲಿ 147741 ಜನರಿಗೆ ಸೋಂಕು ದೃಢಪಟ್ಟಿದ್ದು 6931 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. 77453 ಮಂದಿ ಗುಣಮುಖರಾಗಿದ್ದು 63357 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿ 10560 ಮಂದಿಗೆ ಸೋಂಕು ಪಾಸಿಟಿವ್ ಆಗಿದ್ದು 170 ಮಂದಿ ಸಾವನ್ನಪ್ಪಿದ್ದಾರೆ. 3720 ಸಕ್ರಿಯ ಪ್ರಕರಣಗಳಾಗಿದ್ದು 6670 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ತಮಿಳುನಾಡಿನಲ್ಲಿ 70977, ದೆಹಲಿಯಲ್ಲಿ 73780, ಗುಜರಾತ್ನಲ್ಲಿ 29520, ಉತ್ತರ ಪ್ರದೇಶದಲ್ಲಿ 20193, ರಾಜಸ್ತಾನದಲ್ಲಿ 16296, ಮಧ್ಯಪ್ರದೇಶದಲ್ಲಿ 12596, ಪಶ್ಚಿಮ ಬಂಗಾಳದಲ್ಲಿ 15648, ತೆಲಂಗಾಣದಲ್ಲಿ 11364 ಕೊರೊನಾ ಪ್ರಕರಣಗಳು ದಾಖಲಾಗಿದೆ.