ಉತ್ತರಾಖಂಡ, ಜೂ 26(DaijiworldNews/PY): ಭಾರತ-ನೇಪಾಳ ಗಡಿಯ ಪಿತ್ರೋಗರ್ನ ಧಾರಚುಲ್ನಿಂದ ಕಲಾಪನಿಯವರೆಗೆ ಹೆಚ್ಚುವರಿ ಸಶಸ್ತ್ರ ಪಡೆಯನ್ನು ನಿಯೋಜನೆ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಈ ಪ್ರದೇಶದಲ್ಲಿ ನಿಯೋಜಿಸಲಾಗಿರುವ ಪಡೆಗಳ ಹೊರತಾಗಿಯೂ, ಎಸ್ಎಸ್ಪಿ ಸೇನೆಯವರು ಇದ್ದಾರೆ ಎಂದು ಇನ್ಸ್ಪೆಕ್ಟರ್ ಸಂತೋಷ್ ನೆಗಿ ಅವರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಎಸ್ಎಸ್ಪಿ ಮೂಲಗಳ ಪ್ರಕಾರ, ನೇಪಾಳ ಗಡಿಯನ್ನು ಅಲರ್ಟ್ ಮಾಡಲಾಗಿದೆ. ಉತ್ತರಾಖಂಡದಲ್ಲಿ, ನೇಪಾಳದೊಂದಿಗೆ ಇದ್ದ ಗಡಿ ಪ್ರದೇಶವನ್ನು ಸೀಲ್ ಮಾಡಲಾಗಿದೆ. ಕಡಿಮೆ ಜನಸಂಖ್ಯೆ ಹೊಂದಿರುವ ಪ್ರದೇಶದಲ್ಲಿನ ನೇಪಾಳ ಗಡಿಯಲ್ಲಿ ಕೂಡಾ ಎಸ್ಎಸ್ಪಿ ಪಡೆಯ ಜವಾನರು ಇದ್ದಾರೆ ಎಂದು ತಿಳಿಸಿದೆ.
ಹೊಸ ನಕ್ಷೆಯಯಲ್ಲಿ ಕಠ್ಮಂಡು ಹಾಗೂ ನವದೆಹಲಿಯ ಉದ್ವಿಗ್ನತೆ ಕಂಡುಬಂದಿದ್ದು, ಇದರಲ್ಲಿ ನೆರೆಯ ದೇಶ ಕೆಲವು ಭಾರತೀಯ ಪ್ರದೇಶಗಳ ಮೇಲೆ ಹಕ್ಕು ಸಾಧಿಸಿದೆ.